ಮೇವು ಹಗರಣ ಮತ್ತೊಂದು ಪ್ರಕರಣದಲ್ಲಿಯೂ ಲಾಲೂ ಪ್ರಸಾದ್ ದೋಷಿ; 5 ವರ್ಷ ಜೈಲು, 5 ಲಕ್ಷ ದಂಡ

ಬುಧವಾರ, 24 ಜನವರಿ 2018 (16:11 IST)
ರಾಂಚಿ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಮೇವು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿಯೂ ದೋಷಿ ಎಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

 
ಬಹುಕೋಟಿ ಮೇವು ಹಗರಣದಲ್ಲಿ ಈಗಾಗಲೇ ಎರಡು ಪ್ರಕರಣದಲ್ಲಿ ದೋಷಿ ಎಂದು ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರು ಈಗ ಮೂರನೇ ಪ್ರಕರಣದಲ್ಲೂ ಕೂಡ  ದೋಷಿ ಎಂದು ಪರಿಗಣಿಸಿ 5ವರ್ಷ ಜೈಲು ಶಿಕ್ಷೆ ಹಾಗು 5 ಲಕ್ಷ ರೂ. ದಂಡವನ್ನು ವಿಧಿಸಿದೆ. ಹಾಗೆ ಅವರ ಜೊತೆಗೆ ಬಿಹಾರದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರು ಕೂಡ ದೋಷಿ ಎಂದು ಪರಿಗಣಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ