ಫುಡ್ ಡೆಲಿವರಿ ಬಾಯ್ ಕಷ್ಟಕ್ಕೆ ಸ್ಪಂಧಿಸಿದ ಪೊಲೀಸರು!

ಮಂಗಳವಾರ, 3 ಮೇ 2022 (08:49 IST)
ಇಂದೋರ್ : ರಾತ್ರಿ ಪಾಳಿಯಲ್ಲಿ ಫುಡ್ ಡೆಲಿವರಿ ಬಾಯ್, ಸೈಕಲ್ ತುಳಿದು ಆಹಾರ ವಿತರಣೆ.
 
ಈತನ ಪಾಡು ಕಂಡ ಪೊಲೀಸರು ಹೊಚ್ಚ ಹೊಸ ಬೈಕ್ ಉಡುಗೊರೆ ನೀಡಿ ಯವಕನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮಧ್ಯಪ್ರದೇಶದ ಪೊಲೀಸರು ರಾತ್ರಿ ಪಾಳಿಯಲ್ಲಿದ್ದಾಗ 22ರ ಹರೆಯದ ಯುವಕ ಜಯ್ ಹಲ್ದೆ ಸೈಕಲ್ ತುಳಿಯುತ್ತಾ ಸಂಪೂರ್ಣ ಒದ್ದೆಯಾಗಿದ್ದ.

ಬೆವರಿನಿಂದ ಒದ್ದೆಯಾದ ಯುವಕನ ನಿಲ್ಲಿಸಿದ ಪೊಲೀಸರು ಆತನ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬೈಕ್ ಖರೀದಿಸುವ ಶಕ್ತಿ ತನಗಿಲ್ಲ. ಹೀಗಾಗಿ ಸೈಕಲ್ ಮೂಲಕ ಫುಡ್ ಡೆಲಿವರಿ ಮಾಡುತ್ತಿರುವುದಾಗಿ ಜಯ್ ಹಲ್ದೆ ಹೇಳಿದ್ದಾನೆ.

ಈತನ ಕುಟುಂಬದ ಕತೆ, ಆತನ ಪರಿಸ್ಥಿತಿ ನೋಡಿದ ಮಧ್ಯಪ್ರದೇಶ ಪೊಲೀಸರು ಯುವಕನಿಗೆ ನೆರವು ನೀಡಲು ಮುಂದಾಗಿದ್ದಾರೆ. ಮರುದಿನ ಠಾಣೆಯಲ್ಲಿ ಈ ಕುರಿತು ಇತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಲ್ಲರೂ ಹಣ ಒಗ್ಗೂಡಿಸಿದ್ದಾರೆ. ಬಳಿಕ ಡೌನ್ಪೇಮೆಂಟ್ ಮಾಡಿ ಬೈಕ್ ಖರೀದಿಸಿ, ಜಯ್ ಹಲ್ಡೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಬೈಕ್ನ ಲೋನ್ ಮೂಲಕ ಖರೀದಿಸಾಗಿದೆ. ಉಳಿದ ಕಂತಿನ ಹಣವನ್ನೂ ಪೋಲೀಸರೆ ಭರಿಸಲಿದ್ದಾರೆ. ಈ ಬೈಕ್ ಸಂಪೂರ್ಣವಾಗಿ ಉಚಿತ. ಸೈಕಲ್ ಮೂಲಕ ಫುಡ್ ಡೆಲಿವರಿ ಅತ್ಯಂತ ಕಷ್ಟ. ಇಷ್ಟೇ ಅಲ್ಲ ಆದಾಯ ಕೂಡ ಕಡಿಮೆ. ಇದರಿಂದ ಬೈಕ್ನಲ್ಲಿ ಫುುಡ್ ಡೆಲಿವರಿ ಸೇರಿದಂತೆ ಇತರ ಕೆಲಸಗಳಿಗೆ ಯುವಕನಿಗೆ ನೆರವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ