ಸುವ್ಯವಸ್ಥೆ ಕಾಪಾಡಲು ಡ್ರೋಣ್ ಬಳಕೆ

ಮಂಗಳವಾರ, 26 ಏಪ್ರಿಲ್ 2022 (14:41 IST)
ರಾಯಚೂರು : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಡ್ರೋಣ್ ಮೊರೆ ಹೋಗಿದ್ದಾರೆ.
 
ಅಪರಾಧ ಪತ್ತೆ ಹಚ್ಚಲು, ಪ್ರತಿಭಟನೆ, ಧರಣಿಗಳ ವೇಳೆ ನಿಗಾ ವಹಿಸಲು, ಮೆರವಣಿಗೆ ವೇಳೆ ಹದ್ದಿನ ಕಣ್ಣಿನ ನೋಟಕ್ಕಾಗಿ, ಟ್ರಾಫಿಕ್ ನಿಯಮಪಾಲನೆ ಸೇರಿದಂತೆ ನಾನಾ ಕೆಲಸಗಳಿಗೆ ಇನ್ನು ಮುಂದೆ ಡ್ರೋಣ್ ಬಳಕೆ ಹೆಚ್ಚಾಗಲಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎರಡು ಡ್ರೋಣ್ ಖರೀದಿಸಲಾಗಿದೆ. ಇನ್ನೂ ಎರಡು ಡ್ರೋಣ್ಗಳನ್ನು ಶೀಘ್ರದಲ್ಲೇ ತರಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹೇಳಿದ್ದಾರೆ.

ಒಂದು ಗಂಟೆ ಬ್ಯಾಟರಿ ಸಾಮರ್ಥ್ಯದ ಹಾಗೂ 3 ಕಿ.ಮೀ ದೂರದ ವರೆಗೂ ಚಲಿಸಬಲ್ಲ ಈ ಡ್ರೋಣ್ಗಳು ಇಲಾಖೆಗೆ ಹೆಚ್ಚು ಉಪಯುಕ್ತವಾಗಲಿವೆ ಎಂದು ಎಸ್ಪಿ ನಿಖಿಲ್ ಬಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ