ಬಸಳೆ ಸೊಪ್ಪನ್ನು ಬಳಸಿದರೆ ಈ ಆರೋಗ್ಯ ಸಮಸ್ಯೆಗಳು ನಿವಾರಣೆ

ಗುರುವಾರ, 3 ಸೆಪ್ಟಂಬರ್ 2020 (11:24 IST)
ಬೆಂಗಳೂರು : ಬಸಳೆ ಸೊಪ್ಪನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದನ್ನು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಕೂಡ ಬಳಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

*ಸುಟ್ಟ ಗಾಯಕ್ಕೆ ಬಸಳೆ ಸೊಪ್ಪಿನ ರಸವನ್ನು ಹಸುವಿನ ತುಪ್ಪದಲ್ಲಿ ಕಲಸಿ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.

*ಬಸಳೆ ಸೊಪ್ಪನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಕಾಡುವ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೇ ಗರ್ಭಿಣಿಯರು ಹೆರಿಗೆ ನೋವು ಕಡಿಮೆಯಾಗಲು ಬಸಳೆ ಸೊಪ್ಪಿನ ಕಷಾಯ ಕಡಿಯಿರಿ.

 *ಬಸಳೆ ಹೂವನ್ನು ಹುಳು ಕಚ್ಚಿದ ಜಾಗದಲ್ಲಿ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಹಾಗೇ ಬಸಳೆ ಗಿಡದ ಬೇರನ್ನು ಕಷಾಯ ಮಾಡಿ ಕುಡಿದರೆ ಬೇಧಿ ಸಮಸ್ಯೆ ದೂರವಾಗುತ್ತದೆ.

* ಬಸಳೆ ಎಲೆಗಳ ಲೋಳೆಯನ್ನು ಹಣೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ, ಚೆನ್ನಾಗಿ ನಿದ್ದೆ ಬರುತ್ತದೆ.

*ಅಂಗಾಲು ಉರಿಯುತ್ತಿದ್ದರೆ ಬಸಳೆ ಸೊಪ್ಪಿನ ರಸ ಹಚ್ಚಿದರೆ ಉರಿ ನಿವಾರಣೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ