ಮಾಜಿ ರಾಷ್ಟ್ರೀಯ ಖೋ -ಖೋ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ : ಅತ್ಯಾಚಾರ ಶಂಕೆ
ಭಾನುವಾರ, 12 ಸೆಪ್ಟಂಬರ್ 2021 (12:09 IST)
ಬಿಜ್ನೋರ್ : 24 ವರ್ಷದ ಮಾಜಿ ರಾಷ್ಟ್ರೀಯ ಮಟ್ಟದ ಖೋ-ಖೋ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹೃದಯ ಭಾಗ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಸಂಭವಿಸಿದೆ.ಬಿಜ್ನೋರ್ ನ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಸ್ಲೀಪರ್ ಗಳ ಮಧ್ಯದಲ್ಲಿ ಗಾಯಗೊಂಡು ಬಿದ್ದಿದ್ದಳು. ಏತನ್ಮಧ್ಯೆ, ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.
ಸಂತ್ರಸ್ತೆಯ ಮನೆ ಅಪರಾಧ ಸ್ಥಳದಿಂದ ಕೇವಲ 30 ಮೀಟರ್ ದೂರದಲ್ಲಿದೆ. ನಜೀಬಾಬಾದ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ ಪಿ) ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕುಟಿಯಾ ಕಾಲೋನಿಯ ನಿವಾಸಿಯಾದ ಸಂತ್ರಸ್ತೆ ಶುಕ್ರವಾರ ಬೆಳಿಗ್ಗೆ ಶಾಲೆಯಲ್ಲಿ ಬಯೋಡೇಟಾ ಸಲ್ಲಿಸಲು ತನ್ನ ಮನೆಯಿಂದ ಹೊರಟಿದ್ದರು. ತುಂಬಾ ಸಮಯದವರೆಗೆ ಆಕೆ ಬಾರದೆ ಇದ್ದಾಗ ಅವಳ ಕುಟುಂಬವು ಆಕೆಗೆ ಕರೆ ಮಾಡಿತ್ತು, ಈ ಸಂದರ್ಭದಲ್ಲಿ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು.
ರೈಲ್ವೆ ಸ್ಲೀಪರ್ ಗಳ ಬಳಿ ಹಾದುಹೋಗುತ್ತಿದ್ದ ಆಕೆಯ ನೆರೆಹೊರೆಯವರು ಸಂತ್ರಸ್ತೆಯನ್ನು ಗುರುತಿಸಿದ್ದಾರೆ. ಹುಡುಗಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದಳು. ಸಂತ್ರಸ್ತೆಯ ಕುತ್ತಿಗೆಗೆ ದುಪಟ್ಟಾ ಬಿಗಿಯಲಾಗಿತ್ತು. ಅವಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವಳನ್ನು ಸತ್ತಿದ್ದಾಳೆ ಎಂದು ಘೋಷಿಸಿದರು. ನಂತರ, ಪೊಲೀಸ್ ಜಿಆರ್ ಪಿ ಮತ್ತು ಆರ್ ಪಿಎಫ್ ತಂಡ ಸ್ಥಳಕ್ಕೆ ತಲುಪಿತು.
ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಒ ಸಿಟಿ ಕುಲದೀಪ್ ಗುಪ್ತಾ ಹೇಳಿದರು. ಸಂತ್ರಸ್ತೆ ಮಹಾರಾಷ್ಟ್ರದಲ್ಲಿ ೨೦೧೬ ರ ರಾಷ್ಟ್ರೀಯ ಖೋ-ಖೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ತನ್ನ ಅಧ್ಯಯನದ ಸಮಯದಲ್ಲಿ, ಅವಳು ವಿವಿಧ ಅಂತರ-ವಿಶ್ವವಿದ್ಯಾಲಯ ಚಾಂಪಿಯನ್ ಶಿಪ್ ಗಳಲ್ಲಿ ಸಹ ಆಡಿದ್ದಳು.