ವೇಶ್ಯಾವಾಟಿಕೆಯಿಂದ ತಪ್ಪಿಸಿಕೊಂಡ ಈ ಬಾಲಕಿಯ ಭಯಾನಕ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಸೋಮವಾರ, 31 ಜನವರಿ 2022 (09:48 IST)
ಚೆನ್ನೈ: ನಾಲ್ವರು ಅಪ್ರಾಪ್ತರನ್ನು ವೇಶ‍್ಯಾವಾಟಿಕೆಗೆ ತಳ್ಳಿದ ಆರೋಪದಲ್ಲಿ ಓರ್ವ ಮಹಿಳೆ ಹಾಗೂ ಆಕೆಯ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ತಮಿಳುನಾಡಿನ ಗ್ರಾಮವೊಂದರಿಂದ ಚೆನ್ನೈಗೆ ಹುಡುಗಿಯರನ್ನು ಕರೆತಂದಿದ್ದ ಮಹಿಳೆ ಬಳಿಕ ಅವರನ್ನು ಬಾಡಿಗೆ ಮನೆಯೊಂದರಲ್ಲಿ ಕೂಡಿಹಾಕಿದ್ದಳು. ಅಲ್ಲಿ ತನ್ನ ಸಹಚರರಿಂದ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಬೆದರಿಕೆ ಹಾಕಿ ತನ್ನ ಕೆಲಸ ಮಾಡಿಸುತ್ತಿದ್ದಳು.

ಈ ಬಾಲಕಿಯರು ಪ್ರತಿನಿತ್ಯ ಸಂಜೆ ಏಳು ಗಂಟೆಯಿಂದ ಬೆಳಗ್ಗಿನವರೆಗಿನ ಅವಧಿಯಲ್ಲಿ ಆರು ಪುರುಷರೊಂದಿಗೆ ದೇಹ ಹಂಚಿಕೊಂಡು 50,000 ರೂ.ವರೆಗೆ ಸಂಪಾದಿಸಬೇಕಿತ್ತು. ಆದರೆ ಗಣರಾಜ್ಯೋತ್ಸವ ದಿನ ಬಾಲಕಿಯರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಮಹಿಳೆ ತೀರ್ಮಾನಿಸಿದ್ದಳು. ಆದರೆ ಈ ನಡುವೆ ಬಾಲಕಿಯೋರ್ವಳು ಪೊಲೀಸರನ್ನು ಸಂಪರ್ಕಿಸಿದ್ದಳು. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪೇದೆಗಳು ಸಂತ್ರಸ್ತ ಬಾಲಕಿಯರನ್ನು ರಕ್ಷಿಸುವ ಬದಲು ಆರೋಪಿಗಳಿಂದ ಲಂಚ ಪಡೆದು ಅವರಿಗೇ ಸಹಾಯ ಮಾಡಿದ್ದರು.

ಆದರೆ ಬೆಂಗಳೂರಿಗೆ ಸಾಗಿಸುವ ಯತ್ನದ ನಡುವೆ ಬಾಲಕಿಯೊಬ್ಬಳು ತಪ್ಪಿಸಿಕೊಂಡು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ತಮ್ಮ ಧಾರುಣ ಕತೆಯನ್ನು ಹೇಳಿಕೊಂಡಿದ್ದಳು. ಅದರಂತೆ ಪೊಲೀಸರು ದಾಳಿ ನಡೆಸಿ ಬಾಲಕಿಯರನ್ನು ರಕ್ಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ