ಬೆಂಗಳೂರು : ಆಪಲ್ ಐಫೋನ್ ತಯಾರಿಸುವ ತೈವಾನಿನ ಫಾಕ್ಸ್ಕಾನ್ ಕಂಪನಿ ಬೆಂಗಳೂರಿನಲ್ಲಿ ಜಾಗ ಖರೀದಿಸಿದೆ.
ದೇವನಹಳ್ಳಿ ಬಳಿ 13 ದಶಲಕ್ಷ ಚದರ ಅಡಿಯ ಜಾಗವನ್ನು ಖರೀದಿಸಿರುವುದಾಗಿ ಫಾಕ್ಸ್ಕಾನ್ ಕಂಪನಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ಗೆ ಮಂಗಳವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ಮಾಧ್ಯಮವೊಂದು ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕ ತೆರೆಯಲಿದೆ. ಇದಕ್ಕಾಗಿ ಕಂಪನಿ ಸುಮಾರು 700 ಮಿಲಿಯನ್ ಡಾಲರ್ (ಸುಮಾರು 5.7 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಮುಂದಾಗಿದೆ ಎಂದು ವರದಿ ಮಾಡಿತ್ತು.
ಬೆಂಗಳೂರಿನ ಸಮೀಪ ನಿರ್ಮಾಣವಾಗುತ್ತಿರುವ ಆಪಲ್ ಉತ್ಪಾದನಾ ತಾಣ ಸುಮಾರು 1 ಲಕ್ಷದಷ್ಟು ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.