ನಿಂಬೆ ಹಣ್ಣು ಗಿಫ್ಟ್ ಕೊಟ್ಟ ಸ್ನೇಹಿತರು!

ಸೋಮವಾರ, 18 ಏಪ್ರಿಲ್ 2022 (16:51 IST)
ಗಾಂಧಿನಗರ : ಗುಜರಾತ್ನ ರಾಜ್ಕೋಟ್ನಲ್ಲಿ ಮದುವೆ ಸಮಾರಂಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳು ಸೇರಿ ವರನಿಗೆ ಉಡುಗೊರೆಯಾಗಿ ನಿಂಬೆ ಹಣ್ಣನ್ನು ನೀಡಿದ್ದಾರೆ.

ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್  ಆಗುತ್ತಿದೆ. ವರನ ಸಂಬಂಧಿಕರು ಈ ಬಗ್ಗೆ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ನಿಂಬೆ ಹಣ್ಣಿನ ಬೆಲೆ ಸಾಕಷ್ಟು ಹೆಚ್ಚಾಗಿದೆ.

ರಾಜ್ಕೋಟ್ನಲ್ಲಿ ಕೆಜಿಗೆ 250 ರೂ.ವನ್ನು ದಾಟಿದೆ. ಆದರೆ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಅವಶ್ಯಕತೆ ಇರುತ್ತದೆ. ಅದಕ್ಕಾಗಿಯೇ ನಿಂಬೆ ಹಣ್ಣುಗಳನ್ನು ನೀಡಿದ್ದೇವೆ ಎಂದರು. 

ಪ್ರಸ್ತುತ ಬೇಸಿಗೆ ಕಾಲದಲ್ಲಿ ಪೂರೈಕೆಯಲ್ಲಿನ ಕೊರತೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ನಿಂಬೆ ಬೆಲೆ ಏರಿಕೆಯಾಗಿದೆ. ಈ ಬಾರಿ ನಿಂಬೆ ಹಣ್ಣಿನ ಉತ್ಪಾದನೆ ಕಡಿಮೆಯಾಗಿದ್ದು, ಹೆಚ್ಚುತ್ತಿರುವ ತಾಪಮಾನ ಹಾಗೂ ಹಬ್ಬ ಹರಿದಿನಗಳಿಂದ ಬೇಡಿಕೆ ಹೆಚ್ಚಿದೆ. 

ತೆಲಂಗಾಣ, ರಾಜಸ್ಥಾನ ಮತ್ತು ದೇಶದ ಹಲವಾರು ಭಾಗಗಳಲ್ಲಿ ನಿಂಬೆ ಬೆಲೆ ಗಗನಕ್ಕೇರಿದೆ. ದೆಹಲಿಯ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಆಜಾದ್ಪುರ ಮಂಡಿಯಲ್ಲಿ ನಿಂಬೆಹಣ್ಣು ಕೆಜಿಗೆ 70 ರಿಂದ 90 ರೂ.ಗೆ ಮಾರಾಟವಾಗುತ್ತಿದೆ.

ನಿಂಬೆ ಹಣ್ಣಿನ ಬೆಲೆ ಗುಜರಾತ್ನಲ್ಲಿ ಕೆಜಿಗೆ 240 ರೂ.ಗೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ ಹಾಗೂ ಜೈಪುರದಲ್ಲಿ ನಿಂಬೆಹಣ್ಣು ಕೆಜಿಗೆ 200 ರೂ.ಕ್ಕೂ ಅಧಿಕ ಬೆಲೆಗೂ ದಾಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ