ದೆವ್ವಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ

ಬುಧವಾರ, 19 ಅಕ್ಟೋಬರ್ 2016 (14:42 IST)
ಆಘಾತಕಾರಿ ಘಟನೆಯೊಂದರಲ್ಲಿ ದೆವ್ವವೊಂದು ತಮ್ಮ ಕುಟುಂಬಕ್ಕೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
 
ಗೈಂಡೇವಾಲಿ ಸಡಕ್ ಪ್ರದೇಶದ ನಿವಾಸಿಯಾದ ಮಹಿಳೆ ಮಮತಾ, ತನ್ನ ಎರಡು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ತಮ್ಮ ಕೋಣೆಯಲ್ಲಿ ದೆವ್ವಗಳು ಚಿತ್ರ ವಿಚಿತ್ರವಾದ ಧ್ವನಿಗಳನ್ನು ಹೊರಡಿಸುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. 
 
ಪ್ರತಿದಿನ ಕೆಲ ದೆವ್ವಗಳು ನನ್ನ ಕೋಣೆಗೆ ಬಂದು ಮೊಬೈಲ್‌ನಲ್ಲಿ ಮಾತನಾಡುತ್ತವೆ. ಇದರಿಂದ ಕುಟುಂಬ ಭಯಭೀತವಾಗಿದೆ. ಟೆಲಿವಿಜನ್‌ನಲ್ಲಿ ನಟಿಸುವ ಪಾತ್ರಧಾರಿಗಳು ಟಿವಿಯಿಂದ ಹೊರಬಂದು ದೆವ್ವಗಳಾಗುತ್ತಾರೆ ಎಂದು ತಿಳಿಸಿದ್ದಾರೆ.
 
ನೆರೆಮನೆಯವರೇ ದೆವ್ವಗಳನ್ನು ನಮ್ಮ ಮನೆಗೆ ಕಳುಹಿಸುತ್ತಿದ್ದಾರೆ ಎಂದು ಮಮತಾ ಆರೋಪಿಸಿದ್ದಾಳೆ.
 
ನೆರೆಮನೆಯ ಕುಟುಂಬದವರಾದ ಚಂದ್ರಾವತಿ, ವೀರು ಗೌತಮ್ ಕಾಲಾ ಜಾದು ಮಾಡುತ್ತಿದ್ದು, ತಮ್ಮ ಆಸ್ತಿಯನ್ನು ಕಬಳಿಸಲು ದೆವ್ವಗಳನ್ನು ಕಳುಹಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಏತನ್ಮಧ್ಯೆ, ಡಿಎಸ್‌ಪಿ ಆಲಂ ಖಾನ್, ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ