ರೇಪ್ ಮಾಡಿದ್ದಲ್ಲದೆ, ಯುವತಿ ಮೇಲೆ ವಿಕೃತ ಕೆಲಸ ಮಾಡಿದ ದುರುಳರು
ಸೋದರ ಸಂಬಂಧಿಯೊಂದಿಗೆ ರಾತ್ರಿ ವೇಳೆ ಜಾತ್ರೆಗೆ ಹೋಗಿ ಮನೆಗೆ ಮರಳುತ್ತಿದ್ದಾಗ ಮೂವರು ಕಾಮುಕರು ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಅಲ್ಲಿಂದ ಅದು ಹೇಗೋ ತಪ್ಪಿಸಿಕೊಂಡು ಬಂದ ಯುವತಿ ತನ್ನ ಕುಟುಂಬಸ್ಥರನ್ನು ಸೇರಿದ್ದಾಳೆ. ಬಳಿಕ ಕುಟುಂಬಸ್ಥರ ಜೊತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಇದೀಗ ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತ ಹುಡುಗರನ್ನು ಬಂಧಿಸಲಾಗಿದೆ. 22 ವರ್ಷದ ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆದಿದೆ.