ಮದುವೆ ನೆಪದಲ್ಲಿ ತೀಟೆ ತೀರಿಸಿ ವಂಚಿಸಿದ ಸಹೋದ್ಯೋಗಿ
28 ವರ್ಷದ ವಿಚ್ಛೇದಿತೆ, ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಗೆ ಸಹೋದ್ಯೋಗಿಯೇ ವಂಚಿಸಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಮಾಡಿ ಕೊನೆಗೆ ಮಹಿಳೆ ಮನೆಯವರ ಒಪ್ಪಿಗೆ ಪಡೆದು ಮದುವೆಗೆ ದಿನಾಂಕ ನಿಗದಿಪಡಿಸಿದಾಗ ಕೈ ಎತ್ತಿದ್ದಾನೆ.
ಅಲ್ಲದೆ, ಮಹಿಳೆ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಈ ಹಿನ್ನಲೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.