100 ರೂ.ಗಾಗಿ ಸಂಬಂಧಿಕನ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿದ ಭೂಪ!
ಮಂಗಳವಾರ, 8 ಫೆಬ್ರವರಿ 2022 (11:49 IST)
ಮುಂಬೈ: ಕೇವಲ 100 ರೂ.ಗಾಗಿ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ವೃತ್ತಿಯಲ್ಲಿ ಟ್ರಕ್ ಚಾಲಕನಾಗಿರುವ 28 ವರ್ಷದ ಯುವಕ ತನ್ನ ಸಂಬಂಧಿಕನಿಗೆ 100 ರೂ. ಸಾಲ ನೀಡಿದ್ದ. ಇದನ್ನು ವಾಪಸ್ ಕೇಳಿದಾಗ ಆತ ಕೊಡಲು ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಆರೋಪಿ ಸಂತ್ರಸ್ತನ ಜೊತೆ ಜಗಳ ತೆಗೆದಿದ್ದಾನೆ.
ಇದೇ ಆಕ್ರೋಶದ ಭರದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿ ಮೃತದೇಹವನ್ನು ಸುಟ್ಟು ಹಾಕಿದ್ದಾನೆ. ಬಳಿಕ ಸುಟ್ಟ ಮೃತದೇಹ ನೋಡಿರುವುದಾಗಿ ಪೊಲೀಸರಿಗೆ ಕರೆ ಮಾಡಿ ನಾಟಕವಾಡಿದ್ದಾನೆ. ಆದರೆ ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.