ಅಮ್ಮನ ಮೇಲೆ ಕೈ ಮಾಡಿದ್ದಕ್ಕೆ ಅಪ್ಪನ ಪ್ರಾಣವನ್ನೇ ತೆಗೆದ ಪುತ್ರಿ
ಶನಿವಾರ, 24 ಅಕ್ಟೋಬರ್ 2020 (10:15 IST)
ಭೋಪಾಲ್: ಮದ್ಯದ ಅಮಲಿನಲ್ಲಿ ಅಮ್ಮನಿಗೆ ಸದಾ ಹಿಂಸೆ ನೀಡುತ್ತಿದ್ದ ತಂದೆಯನ್ನು 16 ವರ್ಷದ ಪುತ್ರಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮೊನ್ನೆಯೂ ಇದೇ ರೀತಿ ತಂದೆ, ತಾಯಿಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪುತ್ರಿ ಕೋಲಿನಿಂದ ತಲೆಗೆ ಹೊಡೆದಿದ್ದಾಳೆ. ಏಟಿನ ಭರಕ್ಕೆ ತಂದೆಯ ಪ್ರಾಣ ಹೋಗಿದೆ. ತಕ್ಷಣವೇ ಆರೋಪಿ ಪುತ್ರಿ ಪೊಲೀಸರಿಗೆ ಕರೆ ಮಾಡಿ ತಾನು ಮಾಡಿದ ತಪ್ಪೊಪ್ಪಿಕೊಂಡು ಶರಣಾಗಿದ್ದಾಳೆ. ಇದೀಗ ಆರೋಪಿಯನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ.