ವಾಸ್ತವತೆ ಅರಿಯಲು ಗ್ರಾಮಗಳಿಗೆ ಭೇಟಿ ನೀಡಿ: ಡಿಸಿಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್

ಗುರುವಾರ, 10 ಆಗಸ್ಟ್ 2017 (18:56 IST)
ವಾಸ್ತವ ಸ್ಥಿತಿಗತಿಯನ್ನು ಅರಿಯಲು ಫೈಲ್‌ಗಳನ್ನು ದೂರವಿಟ್ಟು ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಸಂದೇಶ ರವಾನಿಸಿದ್ದಾರೆ.  
ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರದಿಂದ ದೂರವಿರುವ ಪಟ್ಟಣ, ಗ್ರಾಮಗಳಲ್ಲಿರುವ ಆರೋಗ್ಯ ಸೇವಾ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಗ್ರಾಮಗಳಿಗೆ ಭೇಟಿ ನೀಡುವ ಜಿಲ್ಲಾಧಿಕಾರಿಗಳು ಕೇವಲ ಫೈಲ್ ನೋಡಿ ತೀರ್ಮಾನ ತೆಗೆದುಕೊಳ್ಳುವವರಿಗಿಂತ ಹೆಚ್ಚಿನ ಅನುಭವ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ
 
ಪ್ರಧಾನಮಂತ್ರಿ ನರೇಂದ್ರ ಮೋದಿ ನ್ಯೂ ಇಂಡಿಯಾ-ಮಂಥನ್ ಎನ್ನುವ ಕಾರ್ಯಕ್ರಮದಲ್ಲಿ ದೇಶದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದರು.  
 
ಎಲ್ಇಡಿ ಬಲ್ಬ್‌ಗಳು, ಭೀಮ್ ಅಪ್ಲಿಕೇಶನ್, ಮುಂತಾದ ಕಾರ್ಯಕ್ರಮಗಳ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಿಲ್ಲಾಧಿಕಾರಿಗಳು ಪ್ರಯತ್ನಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಜನರಿಗೆ ಸೌಲಭ್ಯಗಳ ಅರಿವಿಲ್ಲ ಎನ್ನುವ ಕಾರಣಕ್ಕೆ ಸರಕಾರ ಜಾರಿಗೆ ತಂದ ಯೋಜನೆಗಳು ವಿಫಲವಾಗುತ್ತವೆ ಎಂದು ತಿಳಿಸಿದ್ದಾರೆ.
 
ಅದೇ ರೀತಿ, ಸ್ವಚ್ಚ ಭಾರತ್ ಅಭಿಯಾನ್ ಜನರಲ್ಲಿ ಒಂದು ಪ್ರತಿಕ್ರಿಯಾಶೀಲ ಆಡಳಿತ ಮತ್ತು ಅರಿವಿನ ಮೇಲೆ ಅವಲಂಬಿತವಾಗಿದೆ, ಈ ನಿಟ್ಟಿನಲ್ಲಿ ನಿಜವಾದ ಬದಲಾವಣೆಯು ಸಾರ್ವಜನಿಕ ಭಾಗವಹಿಸುವಿಕೆ ಮೂಲಕ ಮಾತ್ರ ಬರಬಹುದು ಎಂದು ಒತ್ತಿ ಹೇಳಿದರು.
 
ಜಿಎಸ್‌ಟಿಯ ಬಗ್ಗೆ ವ್ಯಾಪಾರಿಗಳಿಗೆ ಇದು ಯಾವ ರೀತಿಯಲ್ಲಿ ಒಳ್ಳೆಯದಾಗಿದೆ ಮತ್ತು ಸರಳ ತೆರಿಗೆಯಾಗಿದೆ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿಗಳು ವಿವರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ