ರಾಷ್ಟ್ರಪತಿ ಚುನಾವಣೆ ನಂತರ ರಾಜೀನಾಮೆ ನೀಡಲಿರುವ ಗೋವಾ, ಯುಪಿ ಸಿಎಂ!

ಭಾನುವಾರ, 14 ಮೇ 2017 (13:50 IST)
ನವದೆಹಲಿ: ರಾಷ್ಟ್ರಪತಿ ಚುನಾವಣೆ ನಂತರ ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

 
ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಆಡಳಿತಾರೂಢ ಬಿಜೆಪಿಗೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿಯೊಂದು ಮತ ಕೂಡಾ ನಿರ್ಣಾಯಕ. ಹೀಗಾಗಿ ಶತಾಯಗತಾಯ ಗೆಲುವಿಗಾಗಿ ಶ್ರಮಿಸುತ್ತಿರುವ ಬಿಜೆಪಿ ತಮ್ಮ ಪ್ರತಿಯೊಬ್ಬ ಸಂಸದ ಮತವನ್ನೂ ಹಾಳುಗೆಡವದಿರಲು ನಿರ್ಧರಿಸಿದೆ.

ಸಿಎಂ ಆಗಿದ್ದರೂ, ಇವರಿಬ್ಬರೂ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಆರು ತಿಂಗಳ ಕಾಲಾವಕಾಶವಿದೆ. ರಾಷ್ಟ್ರಪತಿ ಚುನಾವಣೆ ನಡೆಯಲಿರುವುದು ಜುಲೈನಲ್ಲಿ. ಹೀಗಾಗಿ ಇವರಿಬ್ಬರೂ ಈ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ.

ಇಬ್ಬರು ಸಿಎಂ ಜತೆಗೆ ಉತ್ತರ ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ತಮ್ಮ ಸಂಸದ ಸ್ಥಾನಕ್ಕೆ ಚುನಾವಣೆ ನಂತರ ರಾಜೀನಾಮೆ ನೀಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ