ಅಕ್ಟೋಬರ್ 6 ರಂದು ಗೋವಾದ ಸಂಗೊಲ್ಡಾದಲ್ಲಿರುವ ನಿವಾಸದಲ್ಲಿ ಮೋನಿಕಾ ಘುರ್ಡೆಯವರ ನಗ್ನ ಮೃತದೇಹ ಪತ್ತೆಯಾಗಿತ್ತು. ಆರೋಪಿಗಳು ಅತ್ಯಾಚಾರವೆಸಗಿ ನಂತರ ಹತ್ಯೆ ಮಾಡಿರಬಹುದು ಪೊಲೀಸರು ಶಂಕಿಸಿದ್ದರು. ಘಟನೆ ನಡೆದ ಮೂರು ದಿನಗಳ ಬಳಿಕ ಗೋವಾ, ಮಂಗಳೂರು, ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಆರೋಪಿ ಜೈಲು ಸೇರಿದ್ದಾನೆ.
ವರದಿಗಳ ಪ್ರಕಾರ, ಮೋನಿಕಾ ಘುರ್ಡೆ ಹತ್ಯೆ ಬಳಿಕ ಆರೋಪಿ ಅವರ 2 ಎಟಿಎಂ ಕಾರ್ಡ್ ಮತ್ತು ಮೊಬೈಲ್ ಕದ್ದಿದ್ದ ಮತ್ತು ಘಟನೆ ಕದ್ದಿದ್ದ ಘಟನೆ ನಡೆದ ಒಂದು ಗಂಟೆಯೊಳಗೆ ಅದೇ ಎಟಿಎಂ ಬಳಸಿ ಆರೋಪಿ ಹಣ ತೆಗೆಯುತ್ತಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದ್ದವು.