ಗೋವಾದಲ್ಲಿ ಸಿಕ್ಕ ಐರಿಶ್ ಮಹಿಳೆಯ ಬೆತ್ತಲೆ ಮೃತದೇಹ ಹೇಳುತ್ತಿತ್ತು ಕ್ರೌರ್ಯದ ಕಥೆ

ಗುರುವಾರ, 16 ಮಾರ್ಚ್ 2017 (08:42 IST)
ಮಾರ್ಗಾವ್(ಮಾ.16): ಗೋವಾದಲ್ಲಿ 28 ವರ್ಷದ ಐರಿಶ್ ಮಹಿಳೆ ಡ್ಯಾನಿಯಲ್ ಮ್ಯಾಕ್ ಮ್ಯಾಕ್`ಗ್ಲಿನ್ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣಕೋಣ ಪೊಲೀಸರು 23 ವರ್ಷದ ರೌಡಿಶೀಟರ್ ವಿಕಟ್ ಭಗತ್ ಎಂಬಾತನನ್ನ ಬಂಧಿಸಿದ್ದಾರೆ.
 

ಮಂಗಳವಾರ ದಕ್ಷಿಣ ಗೋವಾದ ದಿಯೋಬಾಗ್`ನ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ ಮೂವರನ್ನ ವಿಚಾರಣೆಗೊಳಪಡಿಸಲಾಗಿದೆ. 2008ರಲ್ಲಿ ಬ್ರಿಟನ್ನಿನ ಸ್ಕಾರ್ಲೆಟ್ ಕೀಲಿಂಗ್ ಹತ್ಯೆ ಪ್ರಕರಣದಲ್ಲಿ ಇನ್ನೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಅಷ್ಟರೊಳಗೆ ಮತ್ತೊಂದು ಅತ್ಯಾಚಾರ ಮತ್ತು ಕೊಲೆ ನಡೆದಿದೆ.

ಬಂಧಿತ ಭಗತ್ ಅಪರಾಧ ಹಿನ್ನೆಲೆಯುಳ್ಲವನಾಗಿದ್ದು, ಹತ್ಯೆಗೂ ಹಿಂದಿನ ದಿನ ಭಗತ್ ಮತ್ತಿತರರು ಆ ಮಹಿಳೆ ಜೊತೆ ಇದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಐರಿಶ್ ಮಹಿಳೆಯನ್ನ ಕೊಂದಿರುವುದಾಗಿ ಭಗತ್ ತಪ್ಪೊಪ್ಪಿಕೊಂಡಿದ್ದಾನೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಭಗತ್, ತನ್ನ ಸಹಚರರೊಡನೆ ಸೇರಿ ಅತ್ಯಾಚಾರ ಮಾಡಿ ಹೊಡೆದ ಬಿಯರ್ ಬಾಟಲಿನಿಂದ ಚುಚ್ಚಿ ಕೊಂದಿದ್ದಾನೆ. ಮರುದಿನ ಪತ್ತೆಯಾದ ಮೃತದೇಹದ ಮುಖ ಮತ್ತು ತಲೆಯ ಸೇರಿದಂತೆ ವಿವಿಧ ಭಾಗಗಲ್ಲಿ 7 ಗಾಯಗಳು ಕಂಡುಬಂದಿದ್ದು ಕ್ರೌರ್ಯದ ಕಥೆ ಹೇಳುತ್ತಿವೆ.

ಸೋಮವಾರ ಇಲ್ಲಿ ಹೋಳಿ ಆಚರಣೆಯನ್ನ ಆಯೋಜಿಸಲಾಗಿತ್ತು. ಈ ಸಂದರ್ಭ ಐರಿಶ್ ಮಹಿಳೆ ಜೊತೆ ಭಗತ್ ಮತ್ತವನ ಸಹಚರರು ಇರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಜೊತೆಗೆ ಭಗತ್ಕ ಮನೆ ಸಮೀಪದಲ್ಳೆಲೇ ಮಹಿಳೆಯ ಉಡುಪುಗಳೂ ಪೊಲೀಸರಿಗೆ ಸಿಕ್ಕಿವೆ. ಕಳೆದ ವರ್ಷವೂ ಗೋವಾಗೆ ಬಂದಿದ್ದ ಐರಿಶ್ ಮಹಿಳೆ ಭಗತ್ ಜೊತೆ ಪರಿಚಿತಳಾಗಿದ್ದಳು. ಅದೇ ಪರಿಚಯದ ಮೇಲೆ ನಂಬಿಕೆ ಇಟ್ಟಿದ್ದಳು. 

ವೆಬ್ದುನಿಯಾವನ್ನು ಓದಿ