ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ !
ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವ 15,500 ಮಹಿಳಾ ಉದ್ಯೋಗಿಗಳು ನಮಗೆ ಸಂಬಳದಲ್ಲಿ ಅನ್ಯಾಯವಾಗಿದೆ. ಪುರುಷರಷ್ಟೇ ಕೆಲಸ ಮಾಡುತ್ತಿದ್ದರೂ ನಮ್ಮ ಸಂಬಳ ಕಡಿಮೆ ಎಂದು ಆರೋಪಿಸಿದ್ದರು.
ಗೂಗಲ್ ಎಲ್ಲ ಆರೋಪಗಳನ್ನು ತಿರಸ್ಕರಿಸಿ, ಉದ್ಯೋಗಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿತ್ತು. ಈಗ ಎಲ್ಲ ಮಾಜಿ ಉದ್ಯೋಗಿಗಳಿಗೆ ಪರಿಹಾರ ನೀಡುವುದಾಗಿ ಗೂಗಲ್ ಕೋರ್ಟ್ ಮುಂದೆ ಹೇಳಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಗೂಗಲ್, 5 ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟಕ್ಕೆ ಕೊನೆ ಹಾಡಲು ಮುಂದಾಗಿದ್ದೇವೆ. ಎರಡು ಕಡೆಯುವರು ಸಹಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದೆ.