ಸರ್ಕಾರದ ಖಾತೆಗಳು ಹ್ಯಾಕ್!

ಗುರುವಾರ, 7 ಏಪ್ರಿಲ್ 2022 (12:04 IST)
ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ಲೈನ್ ಆಗಿದೆ. ಸರ್ಕಾರ ಬಹುತೇಕ ಆನ್ಲೈನ್ ಮೇಲೆಯೇ ನಡೆಯುತ್ತದೆ.
 
ಈ ಡಿಜಿಟಲ್ ವ್ಯವಹಾರಗಳಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ ಎಂಬುದನ್ನು ಮರೆಯಬಾರದು. ನಮ್ಮ ಹಲವು ಖಾತೆಗಳನ್ನು ಸೈಬರ್ ಖದೀಮರು ಕನ್ನ ಹಾಕಿರುವುದನ್ನು ಕೇಳಿರುತ್ತೀರಿ.

ಈಗ ಹೊಸ ವಿಷಯ ಏನೆಂದರೆ, 2017ರಿಂದ ಈವರೆಗೆ ಕೇಂದ್ರ ಸರ್ಕಾರದ 600ಕ್ಕೂ ಅಧಿಕ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆಯಂತೆ!. ಈ ವಿಷಯವನ್ನು ಸ್ವತಃ ಕೇಂದ್ರ ಸರ್ಕಾರವೇ ನೀಡಿದೆ.

ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರೇ ಸ್ವತಃ ಮಾಹಿತಿಯನ್ನು ಮಂಗಳವಾರ ಲೋಕಸಭೆಗೆ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಕನ್ನ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಟ್ವಿಟರ್ ಖಾತೆಗಳು, ಇ ಮೇಲ್ ಅಕೌಂಟ್ಗಳು ಹ್ಯಾಕ್ಗೆ ಸಂಬಂಧಿಸಿದಂತೆ  ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಸಚಿವ ಅನುರಾಗ್ ಠಾಕೂರ್ ಅವರು ಈ ಉತ್ತರವನ್ನು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ