ಟ್ವಿಟರ್ ನಲ್ಲಿ ಟ್ರೆಂಡ್ ಆಯ್ತು ಆರ್ ಆರ್ ಆರ್ ಬಹಿಷ್ಕರಿಸಿ ಅಭಿಯಾನ: ಕಾರಣವೇನು ಗೊತ್ತಾ?

ಬುಧವಾರ, 23 ಮಾರ್ಚ್ 2022 (10:10 IST)
ಬೆಂಗಳೂರು: ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಇದೇ ವಾರಂತ್ಯಕ್ಕೆ ಬಿಡುಗಡೆಯಾಗಲಿದ್ದು, ಇತ್ತೀಚೆಗೆ ಕರ್ನಾಟಕದಲ್ಲಿ ಚಿತ್ರದ ಪ್ರಿ ರಿಲೀಸ್ ಈವೆಂಟ್ ನಡೆದಿತ್ತು. ಆದರೆ ಈಗ ಟ್ವಿಟರ್ ನಲ್ಲಿ ಬಾಯ್ಕಾಟ್ ಆರ್ ಆರ್ ಆರ್ ಟ್ರೆಂಡ್ ಆಗಿದೆ. ಇದಕ್ಕೆ ಕಾರಣವೇನು ಗೊತ್ತಾ?

ತ್ರಿಬಲ್ ಆರ್ ಸಿನಿಮಾ ಮೂಲ ತೆಲುಗು ಆದರೂ, ಹಿಂದಿ, ಮಲಯಾಳಂ, ತಮಿಳು, ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಆನ್ ಲೈನ್ ಬುಕಿಂಗ್ ಮಾಡಲು ಹೊರಟ ಪ್ರೇಕ್ಷಕರಿಗೆ ಶಾಕ್ ಕಾದಿತ್ತು. ಕನ್ನಡ ಅವತರಣಿಕೆಯ ಆಯ್ಕೆಗಳೇ ಇಲ್ಲದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದು ಕನ್ನಡಿಗರಿಗೆ ಮಾಡಿದ ಅವಮಾನ. ಕನ್ನಡದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಕನ್ನಡ ಅವತರಣಿಕೆಗೆ ಹೆಚ್ಚು ಥಿಯೇಟರ್ ಕೊಡಲ್ಲ.  ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಪುಷ್ಪ, ರಾಧೆ ಶ್ಯಾಮ್ ಸಿನಿಮಾ ಕೂಡಾ ಇದೇ ರೀತಿ ಆಗಿತ್ತು. ಪ್ರಚಾರಕ್ಕೆ ಇಲ್ಲಿನವರು ಬೇಕು, ಆದರೆ ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಲು ಏನು ಕಷ್ಟ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ