ಫೋನ್ ಹ್ಯಾಕ್ ಮಾಡಲು ಸರ್ಕಾರದ ಪ್ರಯತ್ನ
ಕೇಂದ್ರ ಸರ್ಕಾರ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.ನನ್ನ ಕಚೇರಿಯಲ್ಲಿ ಎಲ್ಲರಿಗೂ ಈ ಎಚ್ಚರಿಕೆ ಬಂದಿದೆ ಈ ಕುರಿತಾಗಿ ಕಾಂಗ್ರೆಸ್ ಕೂಡ ಒಂದು ಲಿಸ್ಟ್ ಮಾಡಿದೆ.
ಪವನ್ ಖೇಡಾ, ಸುಪ್ರಿಯಾ, ಪ್ರಿಯಾಂಕಾ ಸೇರಿದಂತೆ ಎಲ್ಲರಿಗೂ ಈ ರೀತಿಯ ಅಲರ್ಟ್ ಮಾಡಿದೆ. ಸರ್ಕಾರಕ್ಕೆ ಬೇಕಿದ್ದಲ್ಲಿ ನನ್ನ ಫೋನ್ ತೆಗೆದುಕೊಳ್ಳಬಹುದು. ಆದರೆ, ನಾನು ಅದಕ್ಕೆ ಹೆದರೋದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.