ಪೆಹಲ್ಗಾಮ್ ಮಾರಣಹೋಮದ ಬೆನ್ನಲ್ಲೇ 48 ಪ್ರವಾಸಿ ತಾಣಗಳಿಗೆ ಬಾಗಿಲು ಹಾಕಿದ ಸರ್ಕಾರ

Sampriya

ಮಂಗಳವಾರ, 29 ಏಪ್ರಿಲ್ 2025 (14:48 IST)
Photo Courtesy X
ಶ್ರೀನಗರ: ಪೆಹಲ್ಗಾಮ್‌ನಲ್ಲಿ ಐದು ದಿನಗಳ ಹಿಂದೆ ನಡೆದ 26 ಜನರ ಮಾರಣಹೋಮದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಎಚ್ಚೆತ್ತುಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ
ತಮ್ಮ 48 ಪ್ರವಾಸಿ ತಾಣಗಳಿಗೆ ಬಾಗಿಲು ಹಾಕಿದೆ.

ಒಂದು ವಾರದ ಹಿಂದೆ ಪಹಲ್ಗಾಮ್ ಪಟ್ಟಣವು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಾಗಿತ್ತು. ಆದರೆ, ಈಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅದರ ಬೆನ್ನಲ್ಲೆ ಸರ್ಕಾರ ಬಿಗಿ ಕ್ರಮಕೈಗೊಂಡಿದ್ದು, ಪ್ರವಾಸಿಗರನ್ನು ನಂಬಿದ ಸಾವಿರಾರು ವ್ಯಾಪಾರಿಗಳು ಕಂಗೆಟ್ಟಿದ್ದಾರೆ.  

ಸುಂದರ ಭೂದೃಶ್ಯಗಳ ಗುರೆಜ್ ಕಣಿವೆ ಸೇರಿದಂತೆ ಒಟ್ಟು 48 ತಾಣಗಳು ಪ್ರವಾಸಿಗರಿಗೆ ತಾತ್ಕಾಲಿಕ ಬಂದ್ ಮಾಡಲಾಗಿದೆ. ಪ್ರಶಾಂತ ಕಣಿವೆಗಳು ಮತ್ತು ಸುಂದರವಾದ ಪರ್ವತಗಳಿಗೆ ಹೆಸರುವಾಸಿಯಾದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಬುಡ್ಗಾಮ್‌ನ ದೂಧ್‌ಪತ್ರಿ ಮತ್ತು ಅನಂತ್‌ನಾಗ್‌ನ ವೆರಿನಾಗ್‌ನಂತಹ ಹಲವಾರು ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಹತ್ಯಾಕಾಂಡದ ನಂತರ ಭಯಭೀತರಾದ ಪ್ರವಾಸಿಗರು ಕೇಂದ್ರಾಡಳಿತ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ, ಆದರೆ ಅನೇಕ ಪ್ರಯಾಣಿಕರು ತಮ್ಮ ಮುಂಬರುವ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಕಾಶ್ಮೀರ ಪ್ರವಾಸೋದ್ಯಮದ ಬಗ್ಗೆ ಅನಿಶ್ಚಿತತೆಯ ಕಾರ್ಮೋಡದ ಮಧ್ಯೆ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ