’ರಾಝಿ’ ಚಿತ್ರದ ಟ್ರೇಲರ್ ನೋಡಿ ಆಲಿಯಾ ಭಟ್ ಪೋಷಕರು ಕಣ್ಣೀರು ಸುರಿಸಿದ್ದು ಯಾಕೆ…?

ಗುರುವಾರ, 12 ಏಪ್ರಿಲ್ 2018 (06:51 IST)
ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದ ’ರಾಝಿ’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಕೂಡ ದೊರೆಯುತ್ತಿದೆ.


ಜಂಗ್ಲಿ ಪಿಕ್ಚರ್ಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರದ ಟ್ರೇಲರ್ ನೋಡಿದ ಜನರು ಆಲಿಯಾ ಭಟ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದ ಟ್ರೇಲರ್ ನೋಡಿದ ನಟಿ ಆಲಿಯಾ ಭಟ್ ತಂದೆ ತಾಯಿ ಮಾತ್ರ ಕಣ್ಣೀರು ಹಾಕಿದ್ದಾರೆ. ಅಂದ ಮಾತ್ರಕ್ಕೆ ಅವರು ಕಣ್ಣೀರು ಹಾಕಿದ್ದು ಬೇಸರದಿಂದಲ್ಲ ಬದಲಾಗಿ ಮಗಳ ನಟನೆ ನೋಡಿ ಆನಂದದಿಂದ ಕಣ್ಣೀರು ಸುರಿಸಿದ್ದಾರೆ.


ಮೇಘನಾ ಗುಲ್ಜಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಆಲಿಯಾ ಭಟ್  ಮೂರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ಜೋಡಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ