ಸರ್ಕಾರಿ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ವೀಕ್ಷಿಸದಂತೆ ನಿರ್ಬಂಧ

ಶುಕ್ರವಾರ, 31 ಮಾರ್ಚ್ 2023 (10:36 IST)
ನವದೆಹಲಿ : ಕಾನೂನಾತ್ಮಕ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ವೀಕ್ಷಿಸದಂತೆ ನಿರ್ಬಂಧಿಸಲಾಗಿದೆ.
 
ಕಂಪನಿಯ ಮಾರ್ಗಸೂಚಿಗಳು ನ್ಯಾಯಾಲಯದ ಆದೇಶದಂತಹ ಮಾನ್ಯ ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ @GovtofPakistan ಖಾತೆಯನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಟ್ವಿಟ್ಟರ್ ಗುರುವಾರ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ನಲ್ಲಿ ಸೂಚನೆ ನೀಡಿದೆ.

ಪಾಕಿಸ್ತಾನದ ಟ್ವಿಟರ್ ಖಾತೆಯನ್ನು ಭಾರತದಲ್ಲಿ ವೀಕ್ಷಿಸಲು ನಿರ್ಬಂಧಿಸಿರುವುದು ಇದು 3ನೇ ಬಾರಿಯ ವರದಿಯಾಗಿದೆ. ಇದಕ್ಕೂ ಮೊದಲು 2022ರ ಅಕ್ಟೋಬರ್ನಲ್ಲಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಇದು 2ನೇ ವರದಿಯಾಗಿದೆ. ಅದಕ್ಕೂ ಮುನ್ನ ಜುಲೈನಲ್ಲಿಯೂ ತಡೆಹಿಡಿಯಲಾಗಿತ್ತು. ಬಳಿಕ ಅನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ