ಸೋಲುವ ಭಯಕ್ಕೆ ಭಾರತ ಪಾಕ್ ಗೆ ಬರ್ತಿಲ್ಲ: ಪಾಕ್ ಕ್ರಿಕೆಟಿಗನ ಆರೋಪ

ಶನಿವಾರ, 25 ಮಾರ್ಚ್ 2023 (10:25 IST)
ಮುಂಬೈ: ಮುಂಬರುವ ಏಷ್ಯಾ ಕಪ್ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದೆ. ಆದರೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಟೀಂ ಇಂಡಿಯಾ ಹಿಂದೇಟು ಹಾಕಿದೆ. ಇದರ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಇಮ್ರಾನ್ ನಾಝಿರ್ ವ್ಯಂಗ್ಯವಾಡಿದ್ದಾರೆ.

ಟೀಂ ಇಂಡಿಯಾ ಏಷ್ಯಾ ಕಪ್ ನಲ್ಲಿ ಭಾಗಿಯಾಗುತ್ತದೆ. ಆದರೆ ಪಾಕಿಸ್ತಾನವೇ ಆತಿಥ್ಯ ವಹಿಸಿದರೂ ಪಾಕ್ ಗೆ ಪ್ರವಾಸ ಮಾಡಲ್ಲ. ಅದರ ಬದಲು ಟೀಂ ಇಂಡಿಯಾಗೆ ವಿದೇಶೀ ತಾಣವೊಂದರಲ್ಲಿ ಪಂದ್ಯ ಆಯೋಜಿಸಲಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಝಿರ್ ಟೀಂ ಇಂಡಿಯಾಕ್ಕೆ ಭದ್ರತೆ ನೆಪವಷ್ಟೇ. ನಮ್ಮ ದೇಶದಲ್ಲಿ ಸೋಲುವ ಭೀತಿ. ಸೋಲುವ ಭೀತಿಯಿಂದಲೇ ಪಾಕ್ ಗೆ ಪ್ರಯಾಣ ಮಾಡುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ