ನವದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗದ(ಯುಜಿಸಿ) ಟ್ವಿಟ್ಟರ್ ಖಾತೆಯನ್ನು ಶನಿವಾರ ತಡರಾತ್ರಿ ಹ್ಯಾಕ್ ಮಾಡಲಾಗಿದೆ.
ಇದು ಕಳೆದ ಎರಡು ದಿನಗಳಲ್ಲಿ ಹ್ಯಾಕ್ ಆಗಿರುವ ಮೂರನೇ ಸರ್ಕಾರಿ ಸಂಸ್ಥೆಯ ಖಾತೆಯಾಗಿದೆ.
ಯುಜಿಸಿ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆದ ಬಳಿಕ ಈ ಖಾತೆಯನ್ನು ಬಳಸಿ ಎನ್ಎಫ್ಟಿಗೆ ಸಂಬಂಧಿಸಿದ ಹಲವಾರು ಟ್ವೀಟ್ಗಳನ್ನು ಮಾಡಲಾಗಿದೆ.
ಯುಜಿಸಿಯ ಟ್ವಿಟ್ಟರ್ ಹ್ಯಾಂಡಲ್ನಲ್ಲಿ 2,96,000 ಕ್ಕೂ ಹೆಚ್ಚು ಅನುಯಾಯಿಗಳಿದ್ದು, ಅಧಿಕೃತ ವೆಬ್ಸೈಟ್ಗೆ ಲಿಂಕ್ ಮಾಡಲಾಗಿದೆ.
ಇದೀಗ ಕೇವಲ 48 ಗಂಟೆಗಳೊಳಗೆ ಹ್ಯಾಕ್ ಆಗಿರುವ 3 ನೇ ಸರ್ಕಾರಿ ಟ್ವಿಟ್ಟರ್ ಖಾತೆ ಯುಜಿಸಿಯದ್ದಾಗಿದೆ.
ಸರ್ಕಾರಿ ಟ್ವಿಟ್ಟರ್ ಖಾತೆಗಳ ಹ್ಯಾಕ್ಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯುಪಿ ಸರ್ಕಾರ ತಿಳಿಸಿದೆ. ಪ್ರಕರಣದ ಬಗ್ಗೆ ಸೈಬರ್ ತಜ್ಞರು ತನಿಖೆ ನಡೆಸುತ್ತಿದ್ದಾರೆ.