ಮೊಮ್ಮಗಳ ಮೇಲೇ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದ ತಾತ
ಹಗಲು ಹೊತ್ತು ಪೋಷಕರು ನೌಕರಿಗೆ ಹೋಗಿದ್ದಾಗ 15 ವರ್ಷದ ಮೊಮ್ಮಗಳ ಮೇಲೆ ಈ ತಾತ ಅತ್ಯಾಚಾರವೆಸಗುತ್ತಿದ್ದ. ಬಳಿಕ ಯಾರಿಗಾದರೂ ಹೇಳಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಬಾಲಕಿ ಯಾರಲ್ಲೂ ಬಾಯಿಬಿಟ್ಟಿರಲಿಲ್ಲ.
ಆದರೆ ಇದ್ದಕ್ಕಿದ್ದಂತೆ ಬಾಲಕಿ ಹೊಟ್ಟೆನೋವು ಎಂದಾಗ ಪೋಷಕರು ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದು, ಆಗ ಆಕೆ 6 ತಿಂಗಳ ಗರ್ಭಿಣಿ ಎನ್ನುವುದು ಗೊತ್ತಾಗಿದೆ. ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ತನ್ನ ಮೇಲಾದ ಅತ್ಯಾಚಾರವನ್ನು ಆಕೆ ಬಾಯ್ಬಿಟ್ಟಿದ್ದಾಳೆ. ತಕ್ಷಣವೇ ಪೋಷಕರು ತಾತನ ವಿರುದ್ಧ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.