ಆಕಾಶ ವಿಮಾನಯಾನ ಆರಂಭಕ್ಕೆ ಗ್ರೀನ್ ಸಿಗ್ನಲ್

ಶುಕ್ರವಾರ, 8 ಜುಲೈ 2022 (09:26 IST)
ನವದೆಹಲಿ : ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲು ವಾಯುಯಾನ ನಿಯಂತ್ರಕದ ಅನುಮತಿ ಪಡೆದುಕೊಂಡಿದೆ.

ಬಿಲಿಯನೇರ್ ಹಾಗೂ ಆಕಾಸ ಏರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರು ಟ್ವೀಟ್ ಮಾಡಿದ್ದಾರೆ.

ನಮ್ಮ ಏರ್ ಆಪರೇಟರ್ ಸರ್ಟಿಫಿಕೇಟ್ ರಶೀದಿಯನ್ನು ಘೋಷಿಸಲು ನಾವು ಸಂತೋಷ ಪಡುತ್ತೇವೆ. ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಆಕಾಸ ವಿಮಾನ ಮಾರಾಟಕ್ಕೆ ಹಾಗೂ ವಾಣಿಜ್ಯ ಕಾರ್ಯಾಚರಣೆಗಳ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆಕಾಶ ಏರ್ ಟ್ವೀಟ್ ಮಾಡಿದೆ.

 ಎಒಸಿ ಹೊಸ ಏರ್ಲೈನ್ಗೆ ವಾಣಿಜ್ಯ ವಾಯುಸಾರಿಗೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ