ಗುಜರಾತ್-ಮುಂಬೈ ನಡುವೆ ನಾಗರಿಕ ವಿಮಾನಯಾನಕ್ಕೆ ಚಾಲನೆ

ಭಾನುವಾರ, 17 ಏಪ್ರಿಲ್ 2022 (10:39 IST)
ಗಾಂಧಿನಗರ : ಕೇಂದ್ರದ `ಉದೇ ದೇಶ್ ಕಾ ಅಮ್ ನಾಗರಿಕ್ (ಉಡಾನ್)’ ಕಾರ್ಯಕ್ರಮದ ಅಡಿಯಲ್ಲಿ ಇದೇ ಮೊದಲ ಬಾರಿಗೆ ಗುಜರಾತ್ನ ಜುನಾಗಡ ಜಿಲ್ಲೆಯ ಕೇಶೋಡ್ ಮತ್ತು ಮುಂಬೈ ನಡುವೆ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ.

ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಮಾನ ಯಾನಕ್ಕೆ ಚಾಲನೆ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮದೊಂದಿಗೆ ರಾಜ್ಯದ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಉದ್ದೇಶಿಸಿ ವಿಮಾನ ಸೇವೆ ಪ್ರಾರಂಭಿಸಲಾಗಿದೆ.

ಈ ಸೌಲಭ್ಯವು ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಲು ಸಹಕರಿಸುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ವ್ಯಾಪಾರ ಸಮೃದ್ಧಿಯ ಹೊಸ ಆಯಾಮವನ್ನೂ ನೋಡಬಹುದಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕೇಂದ್ರ ಸಚಿವರು ಹಿರಾಸರ್ ಮತ್ತು ಧೋಲೆರಾದಲ್ಲಿ ಎರಡು ಹೊಸ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು. ನಾವು ಗುಜರಾತ್ಗೆ 5 ಹೊಸ ವಿಮಾನಗಳನ್ನು ನೀಡಿದ್ದು, ಅಹಮದಾಬಾದ್ನಿಂದ ಅಮೃತಸರ, ರಾಂಚಿ, ಆಗ್ರಾ, ಪೋರಬಂದರ್ನಿಂದ ಮುಂಬೈ, ರಾಜ್ಕೋಟ್ನಿಂದ ಮುಂಬೈಗೆ ಅವು ಪ್ರಯಾಣಿಸಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ