ವರನ ನಾಗಿನ್ ಡ್ಯಾನ್ಸ್ ನೋಡಿ ಮದುವೆ ಮನೆಯಿಂದ ಕಾಲ್ಕಿತ್ತ ವಧು..!

ಶುಕ್ರವಾರ, 30 ಜೂನ್ 2017 (14:35 IST)
ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಸಂಭ್ರಮದ ದಿನ. ಉತ್ತರ ಭಾರತದಲ್ಲಂತೂ ಮದುವೆ ದಿನ ವಧುವರರಾದಿಯಾಗಿ ಸಂಬಂಧಿಕರು ಕುಣಿದು ಕುಪ್ಪಳಿಸುವ ವಾಡಿಕೆ ಇದೆ. ಆದರೆ, ಕುಣಿತವೇ ಒಂದು ಮದುವೆ ಮುರಿದು ಬೀಳಲು ಕಾರಣವಾಗಿದೆ.

ಕಂಠಪೂರ್ತಿ ಕುಣಿದಿದ್ದ ವರ ಮೈಮರೆತು ನಾಗಿನ್ ನೃತ್ಯ ಮಾಡಿದ್ದು, ಈ ನೃತ್ಯ ಕಂಡು ಬೇಸತ್ತ ವದು ನನಗೆ ಮದುವೆಯೇ ಬೇಡವೆಂದು ಹೊರಟು ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅನುಭವ್ ಮಿಶ್ರಾ ಮತ್ತು ಪ್ರಿಯಾಂಕಾ ತ್ರಿಪಾಠಿ ಎಂಬುವವರ ವಿವಾಹ ಕಾರ್ಯಕ್ರಮ ಶಹಜಹಾನ್ ಪುರದಲ್ಲಿ ನಿಶ್ವಯವಾಗಿತ್ತು. ಮದುವೆಯ ಸಂಭ್ರಮದಲ್ಲಿ ವರ ಅನುಭವ್ ತ್ರಿಪಾಠಿ ಕಂಠಪೂರ್ತಿ ಕುಡಿದು ನಾಗಿನ್ ಡ್ಯಾನ್ಸ್ ಮಾಡಿದ್ದಾನೆ. ಸ್ನೇಹಿತರು ಆತನ ಮೇಲೆ ನೊಟುಗಳನ್ನ ಎರಚಾಡಿದ್ದಾರೆ. ಆದರೆ, ಈ ವರ್ತನೆ ವಧು ಪ್ರಿಯಾಂಕಾ ತ್ರಿಪಾಠಿಗೆ ಇಷ್ಟವಾಗಲಿಲ್ಲ. ಮುಜುಗರಗೊಂಡ ವಧು ಮದುವೆ ಮುರಿದುಕೊಂಡು ಮದುವೆ ಮನೆಯಿಂದ ತೆರಳಿದ್ದಾಳೆ.

ಪೋಷಕರು ಎಷ್ಟೇ ಪ್ರಯತ್ನಪಟ್ಟರೂ ವಧುವಿನ ಮನವೊಲಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಬರುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯ್ತಿ ನಡೆದು ಉಡುಗೋರೆಗಳನ್ನಪರಸಪರ ಹಿಂದಿರುಗಿಸಲಾಗಿದೆ.

.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ