42 ವರ್ಷದ ದೀಪಾ ಕೂಡ ಅಗತ್ಯ ಬಿದ್ದರೆ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದರು. ಜತೆಗೆ ಜಯಾ ಮತ್ತು ನಮ್ಮ ಒಡನಾಟಕ್ಕೆ ಶಶಿಕಲಾ ಮುಳುವಾಗಿದ್ದರು. ಅವರನ್ನು ಕಾಣಲು ಸಹ ಬಿಡುತ್ತಿರಲಿಲ್ಲ. ಹಿಂದೆ ನಾವು ನಮ್ಮ ಸಂಬಂಧಿಕರು ಪೋಯಸ್ ಗಾರ್ಡನ್ನಲ್ಲಿ ಜಯಾ ಜತೆಗಿದ್ದೆವು. ಈಗ ಶಶಿಕಲಾ ಮತ್ತು ಆಕೆಯ ಬೆಂಬಲಿಗರು ಅಲ್ಲಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಡಲು ಸಿದ್ಧವೆಂದು ದೀಪಾ ಹೇಳಿದ್ದರು. ಮತ್ತಿಗ ಎಐಡಿಎಂಕೆಯ ಕೆಲ ನಾಯಕರು ಸಹ ದೀಪಾ ಅವರ ಬೆಂಬಲಕ್ಕೆ ನಿಂತಿದ್ದು ಶಶಿಕಲಾ ವಿರುದ್ಧ ರಣತಂತ್ರ ರೂಪಿಸುತ್ತಿದ್ದಾರೆ.