ಸಿಸೇರಿಯನ್‌ ಶಸ್ತ್ರ ಚಿಕಿತ್ಸೆಗೆ ಮಾರ್ಗದರ್ಶಿ ಸೂತ್ರ; ಅರ್ಜಿ ರದ್ದು ಪಡಿಸಿದ ಸುಪ್ರೀಂ

ಶನಿವಾರ, 4 ಆಗಸ್ಟ್ 2018 (13:10 IST)
ನವದೆಹಲಿ: ಅನಿವಾರ್ಯ ಸಂದರ್ಭದಲ್ಲಿ ಸುರಕ್ಷಿತ ಹೆರಿಗೆಗಾಗಿ ಮಾಡುವ ಸಿಸೇರಿಯನ್‌ ಶಸ್ತ್ರ ಚಿಕಿತ್ಸೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ.


ಇನ್ನು ಅರ್ಜಿದಾರ ರೀಪಕ್‌ ಕನ್ಸಾಲ್‌ ಸಲ್ಲಿಸಿದ ಅರ್ಜಿಯು ಕಾನೂನಿನ ದುರುಪಯೋಗ ಎಂದು ಆಕ್ಷೇಪಿಸಿದ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಅವರಿಗೆ 25000 ರೂ. ದಂಡವನ್ನೂ ಕೂಡ  ವಿಧಿಸಿದೆ., ನಾಲ್ಕು ವಾರಗಳ ಒಳಗೆ ದಂಡ ಕಟ್ಟುವಂತೆ ಸೂಚಿಸಿದೆ.

'ಸ್ಪಷ್ಟ ನೀತಿ ಇಲ್ಲದೆ ಇದ್ದ ಕಾರಣ ಕೆಲವು ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಅನಗತ್ಯವಾಗಿ ಸಿ-ಸೆಕ್ಷನ್‌ ನಡೆಸುತ್ತವೆ. ವೈದ್ಯಕೀಯ ಅನಿವಾರ್ಯತೆ ಸಂದರ್ಭದಲ್ಲಿ ಮಾತ್ರ ಸಿಸೇರಿಯನ್‌ ನಡೆಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಶಸ್ತ್ರಚಿಕಿತ್ಸೆಯ ಖರ್ಚೊಂದೇ ಅಲ್ಲದೆ, ಆಸ್ಪತ್ರೆಯಲ್ಲಿ ಹೆಚ್ಚುವರಿ ದಿನಗಳು ನಿಲ್ಲುವ ವೆಚ್ಚವೂ ಕುಟುಂಬದ ಮೇಲೆ ಬೀಳುತ್ತದೆ. ಸರಕಾರಿ ಆಸ್ಪತ್ರೆಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲೇ ಹೆಚ್ಚು ಶಸ್ತ್ರಚಿಕಿತ್ಸೆ ನಡೆಯುತ್ತಿರುವುದು, ಇದೆಲ್ಲ ಉದ್ದೇಶಪೂರ್ವಕ ಎನ್ನುವುದನ್ನು ತೋರಿಸುತ್ತದೆ,'' ಎಂದು ಅರ್ಜಿದಾರರು ವಾದಿಸಿದ್ದರು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ