ಗುಜರಾತ್‌ ಸೇತುವೆ ಕುಸಿತ ಪ್ರಕರಣ, ಸಮಗ್ರ ತನಿಖೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯ

Sampriya

ಗುರುವಾರ, 10 ಜುಲೈ 2025 (17:54 IST)
ನವದೆಹಲಿ: ಗುಜರಾತ್‌ನ ವಡೋದರಾದಲ್ಲಿ ಬುಧವಾರ ನಡೆದ ಗಂಭೀರ ಸೇತುವೆ ಕುಸಿತದ ಘಟನೆಯಲ್ಲಿ 15 ಜನರನ್ನು ಬಲಿತೆಗೆದುಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದ್ದರೂ, ಸಮಗ್ರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 

ಇಂದು ಮುಂಜಾನೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕತ್ವ ಮತ್ತು ಕೇಂದ್ರ ಸರ್ಕಾರವು ಆಡಳಿತವನ್ನು ದೂರಿ  "ಉದಾಸೀನತೆಯ ಮಿತಿಗಳನ್ನು" ದಾಟುತ್ತಿದೆ ಎಂದು ಆರೋಪಿಸಿದರು.

ಗುಜರಾತ್ ಸೇತುವೆ ಕುಸಿತ ಮತ್ತು ಅಹಮದಾಬಾದ್ ವಿಮಾನ ಅಪಘಾತದಂತಹ ಇತ್ತೀಚಿನ ದುರಂತಗಳು "ನಾಯಕತ್ವ ಬಿಕ್ಕಟ್ಟು", "ಅಧಿಕ ಭ್ರಷ್ಟಾಚಾರ" ಮತ್ತು "ಅಸಮರ್ಥತೆ" ಯ ಪರಿಣಾಮವಾಗಿದೆ ಎಂದು ಆರೋಪಿಸಿದರು. 

ಗುಜರಾತ್ ವಡೋದರಾ ಜಿಲ್ಲೆಯ ಗಂಭೀರ ಸೇತುವೆಯ ಹೆಚ್ಚಿನ ಭಾಗವು ಬುಧವಾರ ಕುಸಿದ ನಂತರ ಅವರ ಹೇಳಿಕೆಗಳು ಹೊರಬಿದ್ದಿವೆ. ಅಧಿಕಾರಿಗಳ ಪ್ರಕಾರ ಇನ್ನೂ ಮೂರು ಮೃತದೇಹಗಳು ಪತ್ತೆಯಾಗುವುದರೊಂದಿಗೆ ಗುರುವಾರ ಸಾವಿನ ಸಂಖ್ಯೆ 15 ಕ್ಕೆ ಏರಿದೆ. 

ಇನ್ನೂ ನಾಲ್ವರು ನಾಪತ್ತೆಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ವಡೋದರಾ ಮತ್ತು ಆನಂದ್‌ಗೆ ಸಂಪರ್ಕ ಕಲ್ಪಿಸುವ ಸೇತುವೆಯ ಒಂದು ಭಾಗ ಕುಸಿದ ಪರಿಣಾಮ ವಾಹನಗಳು ಬಿದ್ದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ