ಗುಜರಾತ್ ಗೆಲ್ಲಲು ರಣತಂತ್ರ: ಪ್ರಧಾನಿ ಮೋದಿ ಮಾಡಲಿದ್ದಾರೆ 70 ಬಹಿರಂಗ ಸಭೆ

ಶುಕ್ರವಾರ, 27 ಅಕ್ಟೋಬರ್ 2017 (15:58 IST)
ಗುಜರಾತ್: ರಾಜ್ಯ ವಿಧಾನಸಭೆ ಚುನಾವಣೆ ಗೆಲುವನ್ನು ಪ್ರತಿಷ್ಟೆಯಾಗಿ ಪರಿಗಣಿಸಿರುವ ಬಿಜೆಪಿ ಶತಾಯಗತಾಯ ಗೆಲ್ಲುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಕ್ಷದ ಗೆಲುವಿಗಾಗಿ ಪ್ರಧಾನಿ ಮೋದಿಯವರನ್ನು ನೆಚ್ಚಿಕೊಂಡಿದೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ 50 ರಿಂದ 70 ಬಹಿರಂಗ ಸಭೆ ಆಯೋಜಿಸಿ ಪ್ರಧಾನಿಯಿಂದ ಮತಯಾಚನೆ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದೆ. ದಕ್ಷಿಣ ಗುಜರಾತ್, ಸೌರಾಷ್ಟ್ರ, ಕಚ್ ಮತ್ತು ಸೆಂಟ್ರಲ್ ಗುಜರಾತ್‌ಗಳಲ್ಲಿ ಪ್ರಧಾನಿ ಮೋದಿ 50ರಿಂದ 70 ಬಹಿರಂಗ ಸಭೆ ಉದ್ದೇಶಿಸಿ ಬಿಜೆಪಿ ಪರ ಮತಯಾಚಿಸಲಿದ್ದಾರೆ.

ನ. 10 ರಿಂದ ಮೋದಿ ಪ್ರಚಾರ ಆರಂಭಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಗುಜರಾತ್‌ ನಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ 2017ರ ಜನವರಿಯಿಂದ ಇಲ್ಲಿವರೆಗೆ 10 ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಗುಜರಾತನ್ನು ಆಳಿದ ಮೋದಿ 2014ರಲ್ಲಿ ಪ್ರಧಾನಿಯಾದ ಬಳಿಕ ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸುವ ಮಾಸ್ ಲೀಡರ್ ಇಲ್ಲ. ಹೀಗಾಗಿ ಆ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಳ್ಳುವುದು ಪ್ರಧಾನಿ ಹಾಗೂ ಅಮಿತ್ ಶಾಗೆ ಪ್ರತಿಷ್ಠೆಯ ಕಣವಾಗಿದೆ.

ಇದೇವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಹೆಚ್ಚೆಚ್ಚು ಬಹಿರಂಗ ಸಭೆಗಳಲ್ಲಿ ಮತಯಾಚಿಸಿದರೆ ಒಳ್ಳೆಯದು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಧಾನಿ ಯೋಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ