ಪ್ರಧಾನಿ ಮೋದಿ ಹೊಗಳಿ ಅಚ್ಚರಿ ಮೂಡಿಸಿದ ಕೈ ನಾಯಕ ಗುಲಾಮ್ ನಬಿ ಆಜಾದ್

ಸೋಮವಾರ, 1 ಮಾರ್ಚ್ 2021 (09:07 IST)
ನವದೆಹಲಿ: ಮೊನ್ನೆಯಷ್ಟೇ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ರನ್ನು ಹೊಗಳಿ ಮಾತನಾಡಿದ್ದರು. ಇದೀಗ ಗುಲಾಂ ನಬಿ ಆಜಾದ್ ಪ್ರಧಾನಿ ಮೋದಿಗೆ ಹೊಗಳಿಕೆ ನೀಡಿದ್ದಾರೆ.

 
ಜಮ್ಮುವಿನಲ್ಲಿ ಗುಜ್ಜರ್ ಸಮುದಾಯದವರನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ‘ಪ್ರಧಾನಿಯಾದರೂ ಇನ್ನೂ ತಾವು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಈಗಲೂ ಹೆಮ್ಮೆಯಿಂದ ನಾನು ಚಾಯ್ ವಾಲಾ ಎಂದು ಹೇಳಿಕೊಳ್ಳುತ್ತಾರೆ’ ಎಂದು ಹೊಗಳಿದ್ದಾರೆ. ಕಾಂಗ್ರೆಸ್ ನಲ್ಲಿ ಒಳಬೇಗುದಿ ಇರುವಾಗಲೇ ಗುಲಾಂ ನಬಿ ಆಜಾದ್ ಈ ರೀತಿ ಮೋದಿಯನ್ನು ಹೊಗಳಿರುವುದು ಅಚ್ಚರಿಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ