ಪ್ರಧಾನಿ ಮೋದಿಗೆ ಚೀನಾ ಕಂಡ್ರೆ ಭಯ: ರಾಹುಲ್ ಗಾಂಧಿ

ಭಾನುವಾರ, 28 ಫೆಬ್ರವರಿ 2021 (09:14 IST)
ನವದೆಹಲಿ: ತಮಿಳುನಾಡಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


‘ಚೀನಾಗೆ ಗೊತ್ತು, ಮೋದಿ ಅವರಿಗೆ ಭಯಪಡುತ್ತಾರೆಂದು. ಚೀನಾ ಮೊದಲು ಡೋಕ್ಲಾಂ ವಶಪಡಿಸಿಕೊಂಡು ಪರೀಕ್ಷೆ ಮಾಡಿತು, ಬಳಿಕ ಲಡಾಖ್, ಅರುಣಾಚಲ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಆದರೆ ಪ್ರಧಾನಿ ಮೋದಿ ಇದನ್ನು ನಿರಾಕರಿಸುತ್ತಿದ್ದಾರೆ. ನಮ್ಮ ಪ್ರದೇಶಗಳು ಮತ್ತೆ ನಮಗೆ ಸಿಗಲಾರವು. ನಾವು ನಮ್ಮ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಚೀನಾ ಲಡಾಖ್ ಗೆ ತನ್ನ ಆಧಿಪತ್ಯ ನಿಲ್ಲಿಸದು’ ಎಂದು ರಾಹುಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ