ಅತ್ಯಾಚಾರ ಪ್ರಕರಣದಲ್ಲಿ ದೇರಾ ಮುಖ್ಯ ರಾಮ್ ರಹೀಮ್ ದೋಷಿ: ಸಿಬಿಐ ಕೋರ್ಟ್ ತೀರ್ಪು

ಶುಕ್ರವಾರ, 25 ಆಗಸ್ಟ್ 2017 (16:24 IST)
ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣದ ಸ್ವಯಂಘೋಷಿತ ದೇವಮಾನ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ ರಹೀಮ್ ಸಿಂಗ್ ದೋಷಿ ಎಂದು ಹರ್ಯಾಣದ ಪಂಚಕುಲದ ವಿಶೇಷ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಸೋಮವಾರ ಆಗಸ್ಟ್ 28ರಂದು ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ.  


ಅತ್ತ, ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಇತ್ತ ಬಾಬಾ ಭಕ್ತರು ಹಿಂಸಾಚಾರದಲ್ಲಿ ತೊಡಗಿದ್ದಾರೆ, ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಟಿವಿ ಚಾನಲ್`ಗಳ ೋಬಿ ವ್ಯಾನ್`ಗಳನ್ನ ಜಖಂ ಮಾಡಲಾಗಿದೆ. ಪೊಲಿಸರು ಮತ್ತ ಅರೆಸೇನಾಪಡೆ ಪರಿಸ್ಥಿತಿ ಹತೋಟಿಗೆ ತರಲು ಶತಪ್ರಯತ್ನ ನಡೆಸುತ್ತಿವೆ.

ಇತ್ತ, ಪಂಜಾಬ್`ನ 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ತೀರ್ಪಿನ ಬಳಿ ದೇರಾ ಸಚ್ಚಾ ಸೌಧಧ ಮುಖ್ಯಸ್ಥ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮಮ್ ಸಿಂಗ್ ಅವರನ್ನ ಅಂಬಾಲ ಜೈಲಿಗೆ ಕರೆದೊಯ್ಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ