ಹಲಾಲ್ ಇದು ಅಂತ್ಯವಲ್ಲ ಆರಂಭ!

ಸೋಮವಾರ, 4 ಏಪ್ರಿಲ್ 2022 (09:40 IST)
ಬೆಂಗಳೂರು : ಹಲಾಲ್ ಬಾಯ್ಕಾಟ್ಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಹಲಾಲ್ ದಂಗಲ್ನ್ನು ಒಂದು ದಿನಗಷ್ಟೇ ಸಿಮೀತವಾಗಿಸದೇ ಇದನ್ನು ದೊಡ್ಡ ಮಟ್ಟದಲ್ಲಿ ಆರಂಭ ಮಾಡಲು ಹಿಂದೂ ಸಂಘಟನೆಗಳು ಈಗ ಸಜ್ಜಾಗಿದೆ.

ಯಗಾದಿ ಮರು ದಿನವಾದ ಹೊಸತೊಡಕು ವೇಳೆ ಗ್ರಾಹಕರು ಹಿಂದೂ ಅಂಗಡಿಗಳ ಮುಂದೆ ಸಾಲು ಸಾಲು ನಿಂತಿದ್ದರು. ಜಟ್ಕಾ ಕಟ್ ಖರೀದಿಗಾಗಿಯೇ ಬೇರೆ ಜಾಗಗಳಿಂದ ಬಂದಿದ್ದರು. ಭಾನುವಾರ ಒಂದೇ ದಿನಕ್ಕೆ ಜಟ್ಕಾ ಕಟ್ ಅಂಗಡಿಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವ್ಯಾಪಾರವಾಗಿತ್ತು. ಇದರಿಂದಾಗಿ ಹಿಂದೂಪರ ಸಂಘಟನೆಗಳು ಫುಲ್ ಉತ್ಸಾಹದಲ್ಲಿದ್ದಾರೆ.

ರಾಜ್ಯಾದ್ಯಂತ ಜಟ್ಕಾ ಕಟ್ಗೆ ಜನರು ಬಾರಿ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ವಾರ್ಡ್ ಮಟ್ಟದಲ್ಲಿ ಜಟ್ಕಾ ಕಟ್ ಓಪನ್ಗೆ ಸಿದ್ಧತೆ ನಡೆಸಿವೆ. ಅಷ್ಟೇ ಅಲ್ಲದೇ ರಾಜ್ಯ ರಾಜಧಾನಿ ಬೆಂಗಳೂರಿನ 198 ವಾರ್ಡ್ಗಳಲ್ಲೂ ಜಟ್ಕಾ ಕಟ್ ಅಂಗಡಿ ತೆರೆಯಲು ಮುಂದಾಗಿವೆ.  

ಸದ್ಯಕ್ಕೆ ಬಿಬಿಎಂಪಿ ತಾತ್ಕಾಲಿಕ ಜಟ್ಕಾ ಕಟ್ ಶಾಪ್ಗಳನ್ನು ತೆರೆಯಲು ಅನುಮತಿ ನೀಡಿರಲಿಲ್ಲ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಅನುಮತಿ ಪಡೆದು ಜಟ್ಕಾ ಕಟ್ಗಳ ಓಪನ್ ಮಾಡಲು ಹಿಂದೂಪರ ಸಂಘಟನೆಗಳು ಚಿಂತನೆ ನಡೆಸಿವೆ. ಈಗಾಗಲೇ ಆಸಕ್ತ ಯುವಕರಿಗೆ ಜಟ್ಕಾ ಕಟ್ ಟ್ರೈನಿಂಗ್ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ