ತಾಯಿ ಮತ್ತು ತಂಗಿಗೆ ರೌಡಿಗಳ ಕಿರುಕುಳ

geetha

ಶನಿವಾರ, 24 ಫೆಬ್ರವರಿ 2024 (21:08 IST)
ಹರ್ಯಾಣಾ : ಗುರುವಾರ ತನ್ನ ತಾಯಿ ಹಾಗೂ ಸೋದರಿಯೊಡನೆ ಬಾಲಕ ಗೊಬ್ಬರಕ್ಕಾಗಿ ಸಗಣಿ ಸಂಗ್ರಹಿಸಲು ಹೋಗಿದ್ದ. ವಾಪಸ್‌ ಬರುವಾಗ ಮೂರು ಬೈಕ್‌ ಗಳಲ್ಲಿ ಬಂದ ಎಂಟು ಮಂದಿ ರೌಡಿಗಳ ಗುಂಪೊಂದು ಇಬ್ಬರು ಮಹಿಳೆಯರನ್ನು ಅಶ್ಲೀಲವಾಗಿ ಚುಡಾಯಿಸಿತ್ತು. ಇದನ್ನು ಬಾಲಕ ಪ್ರಶ್ನಿಸಿದಾಗ ಅವರಲ್ಲೊಬ್ಬ ಪಿಸ್ತೂಲು ತೆಗೆದು ಬಾಲಕನತ್ತ ಗುಂಡು ಹಾರಿಸಿದ್ದ. ರೌಡಿಗಳ ಗುಂಪೊಂದು ತನ್ನ ತಾಯಿ ಹಾಗೂ ಸೋದರಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ 10 ನೇ ತರಗತಿಯ ಬಾಲಕನಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿರುವ ಘಟನೆ ಹರ್ಯಾಣಾದ ಪಲ್ವಾಲ್‌ ನಲ್ಲಿ ನಡೆದಿದೆ.

ಸಧ್ಯಕ್ಕೆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.ಗುಂಡು ಹಾರಿಸಿದ ಗುಂಪಿನ ರೌಡಿಗಳಲ್ಲಿ ಒಬ್ಬನನ್ನು ಬಾಲಕ ಗುರುತಿಸಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ