ಸ್ನೇಹಿತರೊಂದಿಗೆ ಬೆಟ್‌ ಕಟ್ಟಿ ಯುವತಿಯನ್ನು ಟಚ್‌ ಮಾಡಿದ ಯುವಕ

geetha

ಗುರುವಾರ, 1 ಫೆಬ್ರವರಿ 2024 (20:05 IST)
ಬೆಂಗಳೂರು : ಗ್ಯಾಸ್‌ ಸಿಲಿಂಡರ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಚಂದನ್‌ ತನ್ನ ಸ್ನೇಹಿತರೊಂದಿಗೆ ಸಿನಿಮಾಗೆ ತೆರಳಿದ್ದ. ಬಳಿಕ ಅಲ್ಲಿನ ಹೋಟೆಲ್‌ ಒಂದರಲ್ಲಿ ಊಟಕ್ಕೆ ತೆರಳಿದ್ದಾಗ ಕೌಂಟರ್‌ ನಲ್ಲಿ ನಿಂತಿದ್ದ ಯುವತಿಯೊಬ್ಬಳನು ಸ್ಪರ್ಷಿಸುವುದಾಗಿ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿದ್ದ.  ಆದರೆ ಯುವತಿ ಈತನ ವಿಕೃತ ವರ್ತನೆಯಿಂದ ಕುಪಿತಳಾಗಿ ಪೊಲೀಸರಲ್ಲಿ ದೂರು ನೀಡಿದ್ದಳು. ಸ್ನೇಹಿತರೊಂದಿಗೆ ಬೆಟ್‌ ಕಟ್ಟಿ ಯುವತಿಯೊಬ್ಬಳನ್ನು ಅನುಚಿತವಾಗಿ ಸ್ಪರ್ಶಿಸಿ ಮುಜುಗರಕ್ಕೀಡು ಮಾಡಿದ ಯುವಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಂದನ್‌ ವಿಕೃತ ಕಾಮಿ ಯುವಕನಾಗಿದ್ದು ಸಧ್ಯಕ್ಕೆ ಪೊಲೀಸರ ವಶದಲ್ಲಿದ್ದಾನೆ.ಹೋಟೆಲ್‌ ನಲ್ಲಿದ್ದ ಸಿಸಿಟಿವಿ ಕೆಮೆರಾ ದೃಶ್ಯದಲ್ಲಿ ಚಂದನ್‌ ವಿಕೃತಿ ಬಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಂದನ್‌ನನ್ನು ಜೈಲಿಗೆ ಕಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ