ಸಾರ್ವಜನಿಕ ಸ್ಥಳದಲ್ಲೆ ಯುವತಿ ಎದುರಿಗೆ ವ್ಯಕ್ತಿಯೊಬ್ಬನಿಂದ ಹಸ್ತ ಮೈಥುನ

geetha

ಮಂಗಳವಾರ, 9 ಜನವರಿ 2024 (18:20 IST)
ಬೆಂಗಳೂರು-ಸಾರ್ವಜನಿಕ ಸ್ಥಳದಲ್ಲೆ ಯುವತಿ ಎದುರಿಗೆ ವ್ಯಕ್ತಿಯೊಬ್ಬನಿಂದ ಹಸ್ತ ಮೈಥುನ ಮಾಡಿರುವ ಘಟನೆ ಮಹಾದೇವಪುರದ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.ಕಾರನ್ನ ಪಾರ್ಕ್ ಮಾಡಿ ಕಾರಿನಲ್ಲಿ ಯುವತಿ ಕುಳಿತುಕೊಂಡಿದ್ದ.ಅ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ಹಸ್ತಮೈಥುನ ಮತ್ತು ಅಸಭ್ಯ ವರ್ತನೆ ತೋರಲಾಗಿದೆ.ಅದನ್ನ ನೋಡಿ ಹೆದರಿಕೆಯಿಂದ ಯುವತಿ ಕಾರ್ ಡೋರ್ ಲಾಕ್ ಮಾಡಿಕೊಂಡಿದ್ದಾಳೆ.ಅನಂತರ ಕಾರಿನ ಬಳಿ ಬಂದು ಕಾರಿನ ಸುತ್ತಲು ಅಪರಿಚಿತ ವ್ಯಕ್ತಿ ಓಡಾಡಿದ್ದಾನೆ.

ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲಿ ಯುವತಿಯನ್ನ ವ್ಯಕ್ತಿ ನೋಡಿದ್ದಾನೆ.ಹೆದರಿಕೆಯಿಂದ ಅತನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸ್ಟೆರಿಂಗ್  ಕೆಳಗೆ ಯುವತಿ ಅವಿತುಕೊಂಡಿದ್ದಾಳೆ.ಅಕೆಯ ಸ್ನೇಹಿತರೊಬ್ಬರು ಬಂದ ನಂತರ ಕಾರಿನಿಂದ ಯುವತಿ ಕೆಳಗಿಳಿದಿದ್ದಾಳೆ.ಟ್ವೀಟ್ ನಲ್ಲಿ ತಾನು ಅನುಭವಿಸಿದ ಸಮಸ್ಯೆ ಬಗ್ಗೆ ಯುವತಿ ಬರೆದು ಕೊಂಡಿದ್ದಾಳೆ.ಜನವರಿ 5 ನೇ ತಾರೀಖಿನಂದು ಉಲ್ಲೇಖದ ಬಗ್ಗೆ ಘಟನೆ ನಡೆದಿದೆ.ಮಹಾದೇವಪುರ ಪೊಲೀಸ್ ಠಾಣೆಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ