ಪತ್ನಿಯ ಕಿರುಕುಳ: ಅತುಲ್ ಸುಭಾಷ್ ಪ್ರಕರಣದಂತೆ ವಿಡಿಯೋ ಮಾಡಿಟ್ಟು ಟೆಕ್ಕಿ ಆತ್ಮಹತ್ಯೆಗೆ ಶರಣು

Sampriya

ಶುಕ್ರವಾರ, 28 ಫೆಬ್ರವರಿ 2025 (16:10 IST)
ಆಗ್ರಾ:  ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಎಂಜಿನಿಯರ್‌ ಅತುಲ್ ಸುಭಾಷ್ ಪ್ರಕರಣದಂತೆ ಮತ್ತೊಂದು ಘಟನೆ  ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. 30 ವರ್ಷದ ಟೆಕಿಯೊಬ್ಬ ತಾನು ಸಾಯುತ್ತಿರುವುದಕ್ಕೆ ಹೆಂಡತಿಯೇ ಕಾರಣ ಎಂದು ಹೇಳಿ ವಿಡಿಯೊ ಹಂಚಿಕೊಂಡು ಫೆ.24ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಟೆಕ್ಕಿಯನ್ನು ಮಾನವ್‌ ಶರ್ಮಾ ಎಂದು ಗುರುತಿಸಲಾಗಿದೆ. ಮಾನವ್‌ ಮುಂಬೈನಲ್ಲಿ ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಜ.30ರಂದು ನಿಕಿತಾ ಎನ್ನುವ ಯುವತಿಯೊಂದಿಗೆ ಮಾನವ್ ವಿವಾಹವಾಗಿತ್ತು ಎಂದು ವರದಿ ತಿಳಿಸಿದೆ.

ಮಾನವ್‌ ಅವರ ತಂದೆ ನರೇಂದ್ರ ಶರ್ಮಾ ಅವರ ದೂರಿನ ಪ್ರಕಾರ, ಫೆ.23ರಂದು ಮಾನವ್ ಮತ್ತು ನಿಕಿತಾ ಆಗ್ರಾಗೆ ಬಂದಿದ್ದರು. ನಂತರ ಮಾನವ್, ನಿಕಿತಾ ಆಕೆಯ ಪೋಷಕರ ಮನೆಗೆ ಹೋಗಿದ್ದರು, ಅಲ್ಲಿ ಮಾನವ್‌ನನ್ನು ಅವಮಾನಿಸಿದ್ದಾರೆ. ಮನೆಗೆ ವಾಪಾಸ್ಸಾದ ಮಾನವ್ ಅವರು ಫೆ 24ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಮೊಬೈಲ್‌ನಲ್ಲಿ ವಿಡಿಯೊ ಮಾಡಿರುವ ಮಾನವ್, 'ಆತ್ಮಹತ್ಯೆ ಮಾಡಿಕೊಳ್ಳಲು ನ್ನನ ಹೆಂಡತಿಯೇ ಕಾರಣ. ಸದ್ಯ ಈ ವಿಡಿಯೋ ಸಾಮಾಜಿಕ ಜಾಳತಾನದಲ್ಲಿ ಹರಿದಾಡುತ್ತಿದೆ.

ಮಾನವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಿಕಿತಾ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರ ಸಂಬಂಧದಲ್ಲಿ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಎಸಿಪಿ ವಿನಾಯಕ್ ಭೋಸ್ಲೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ