ಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹರ್ಯಾಣ ಸಿಎಂ

ಸೋಮವಾರ, 14 ಅಕ್ಟೋಬರ್ 2019 (11:15 IST)
ನವದೆಹಲಿ: ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ನೀಡಿದ ಹೇಳಿಕೆಯೊಂದು ಇದೀಗ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.


ಹರ್ಯಾಣ ಸಿಎಂ ಖಟ್ಟರ್, ಸೋನಿಯಾ ಗಾಂಧಿ ಕಾಂಗ್ರೆಸ್ ನ ಮಧ್ಯಂತರ ನಾಯಕಿಯಾಗಿದ್ದನ್ನು ವ್ಯಂಗ್ಯ ಮಾಡುವಾಗ ‘ವಿಲನ್ ಮಹಿಳೆ’ ಎಂಬ ಅರ್ಥ ಬರುವ ಶಬ್ಧ ಬಳಸಿದ್ದರು.

ಇದು ಕಾಂಗ್ರೆಸ್ ರೊಚ್ಚಿಗೇಳಿಸಿತ್ತು. ಸಿಎಂ ಖಟ್ಟರ್ ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ. ಇದು ಕೇವಲ ಸೋನಿಯಾ ಗಾಂಧಿ ಬಗ್ಗೆ ಕೀಳು ಹೇಳಿಕೆ ಮಾತ್ರವಲ್ಲ, ಮಹಿಳೆಯರ ಬಗ್ಗೆ ಬಿಜೆಪಿಗಿರುವ ಕೀಳು ಮನೋಭಾವವನ್ನು ತೋರುತ್ತದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ