ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್ ಹೇಳಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಗೆ ಹೋಲಿಸಿದರೆ ಶೇ.1 ಪ್ರಮಾಣದಲ್ಲಿ ಸೋಂಕು ಹರಡಿದೆ. ಇದನ್ನು ಸಮುದಾಯ ಹರಡುವಿಕೆ ಎಂದು ಕರೆಯಲು ಸಾಧ್ಯವಿಲ್ಲ. ಭಾರತದ ಕೆಲವು ಕಂಟೈನ್ ಮೆಂಟ್ ಝೋನ್ ಗಳಿರುವ ನಗರಗಳಲ್ಲಿ ಮಾತ್ರ ಸೋಂಕು ಹರಡುತ್ತಿದೆ. ಅದನ್ನು ತಡೆಯುವ ಕೆಲಸ ನಡೆಯುತ್ತಿದೆ. ಇದರ ಜೊತೆಗೆ ಟೆಸ್ಟಿಂಗ್ ಕೂಡ ಹೆಚ್ಚಿಸಲಾಗಿದೆ. ಲಾಕ್ ಡೌನ್ ನಿಂದಾಗಿ ಭಾರತದಲ್ಲಿ ಕೊರೊನಾ ಹರಡುವ ವೇಗಕ್ಕೆ ತಡೆ ಹಾಕಿದ್ದು ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.