ಪ್ರಿಯಕರನ ಜೊತೆ ಸೇರಿಕೊಂಡು ಸ್ವಂತ ಮಕ್ಕಳನ್ನೇ ಮಾರಿದ ತಾಯಿ!

ಶನಿವಾರ, 1 ಅಕ್ಟೋಬರ್ 2022 (08:40 IST)
ಉಜ್ಜೈನಿ: ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ವ್ಯಕ್ತಿಯ ಜೊತೆ ಸೇರಿಕೊಂಡು ತಾಯಿ ಎನಿಸಿಕೊಂಡವಳು ತನ್ನ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ಘಟನೆ ಉಜ್ಜೈನಿಯಲ್ಲಿ ನಡೆದಿದೆ.

16, 14 ಮತ್ತು 12 ವರ್ಷದ ಬಾಲಕಿಯರನ್ನು ತಲಾ 4 ಲಕ್ಷ ರೂ.ಗೆ ಮಹಿಳೆ ಮಾರಾಟ ಮಾಡಿದ್ದಳು. ಅದರಲ್ಲೂ ಕೊನೆಯವಳನ್ನು 1.75 ಲಕ್ಷ ರೂ.ಗೆ ಮಾರಾಟ ಮಾಡಿ ಖರೀದಿಸಿದ ವ್ಯಕ್ತಿಯ ಜೊತೆ ಮದುವೆಯನ್ನೂ ಮಾಡಿಸಿದ್ದಳು.

ಆದರೆ ಅದು ಹೇಗೋ ಈ ನರಕದಿಂದ ತಪ್ಪಿಸಿಕೊಂಡು ಅಜ್ಜನ ಮನೆಗೆ ಬಂದ ಬಾಲಕಿಯನ್ನು ತಮ್ಮ ಪರಿಸ್ಥಿತಿ ವಿವರಿಸಿದ್ದಾರೆ. ಬಳಿಕ ತಾತ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದೀಗ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ