ಹಿಮಾಚಲ ಪ್ರದೇಶ ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಪ್ರೇಮಕುಮಾರ್ ಧುಮಾಲ್

ಮಂಗಳವಾರ, 31 ಅಕ್ಟೋಬರ್ 2017 (17:15 IST)
ಹಿಮಾಚಲ ಪ್ರದೇಶದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ಪ್ರೇಮಕುಮಾರ್ ಧುಮಾಲ್ ಅವರನ್ನು ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ಬಿಜೆಪಿ ಹಿರಿಯ ನಾಯಕರಾದ ಧುಮಾಲ್ ಮಾರ್ಚ್ 1998 ರಿಂದ ಮಾರ್ಚ್ 2003 ಮತ್ತು ಜನವರಿ 2008 ರಿಂದ 25 ಡಿಸೆಂಬರ್ 2012 ರವರೆಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
 
ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಧುಮಾರ್ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಘೋಷಿಸಿದ್ದಾರೆ.
 
ಪ್ರೇಮಕುಮಾರ್ ಧುಮಾಲ್ ನೇತೃತ್ವದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಎದುರಿಸಲಿದೆ. ಧುಮಾವ್ ಪ್ರಸ್ತುತ ಮಾಜಿ ಸಿಎಂ ಆಗಿದ್ದಾರೆ. ಆದರೆ, ಡಿಸೆಂಬರ್ 18 ರ ನಂತರ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಾ ಘೋಷಿಸಿದ್ದಾರೆ. 
 
ಪ್ರಸ್ತುತ ಪ್ರೇಮಕುಮಾರ್ ಧುಮಾರ್ ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 
ಇದಕ್ಕಿಂತ ಮೊದಲು ಕೇಂದ್ರ ಸಚಿವ ಜೆ.ಪಿ.ನಡ್ಡಾ ಪಕ್ಷದ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಉಹಾಪೋಹಗಳು ಹರಡಿದ್ದವು. ಆದರೆ. ಧುಮಾಲ್ ಅವರಿಗೆ ರಾಜ್ಯದ ಜನಸಾಮಾನ್ಯರೊಂದಿಗಿನ ಸಂಪರ್ಕದಿಂದಾಗಿ ಸಿಎಂ ಸ್ಥಾನ ನಡ್ಡಾ ಕೈ ಬಿಟ್ಟು ಹೋಗಿದೆ ಎಂದು ಮೂಲಗಳು ತಿಳಿಸಿವೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ