ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಮೂವರು ಮಹಿಳೆಯರು ಪ್ರಮಾಣ ಸ್ವೀಕಾರ

ಮಂಗಳವಾರ, 31 ಆಗಸ್ಟ್ 2021 (14:11 IST)
ಕರ್ನಾಟಕದ ನ್ಯಾಯಮೂರ್ತಿ ಬಿವಿ ನಾಗರತ್ನ ಸೇರಿದಂತೆ ಮೂವರು ಮಹಿಳೆಯರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಮಂಗಳವಾರ ಪ್ರಮಾಣ
ವಚನ ಸ್ವೀಕರಿಸಿದರು. ಈ ಮೂಲಕ ಇದೇ ಮೊದಲ ಬಾರಿ ಒಂದೇ ಬಾರಿ ಮೂವರು ಮಹಿಳೆಯರು ಪ್ರಮಾಣ ಸ್ವೀಕರಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ 9 ನ್ಯಾಯಮೂರ್ತಿಗಳ ಪೈಕಿ ಕರ್ನಾಟಕದ ಬಿವಿ ನಾಗರತ್ನ, ಹಿಮಾ ಕೊಹ್ಲಿ ಮತ್ತು ಬೇಲಾ ಎಂ.ತ್ರಿವೇದಿ ಮೂವರು ಮಹಿಳೆಯರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಒಟ್ಟಾರೆ 33 ನ್ಯಾಯಮೂರ್ತಿಗಳ ಪೈಕಿ ಇದೀಗ ನಾಲ್ವರು ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಿದ್ದು, ಇತಿಹಾಸದಲ್ಲೇ ಗರಿಷ್ಠ ಎಂದು ಹೇಳಲಾಗಿದೆ. ಇದುವರೆಗೆ 11 ಮಹಿಳಾ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನಲ್ಲಿ ಸೇವೆ ಸಲ್ಲಿಸಿದಂತಾಗಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿರುವ ಬಿವಿ ನಾಗರತ್ನ 2027ರಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸಲಿದ್ದು, ಈ ಮೂಲಕ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ