ವೈವಾಹಿಕ ಅತ್ಯಾಚಾರ ಅಪರಾಧವಲ್ಲ : ತೀರ್ಪಿನ ವಿರುದ್ಧ ಭಾರೀ ಆಕ್ರೋಶ!

ಗುರುವಾರ, 12 ಮೇ 2022 (11:49 IST)
ನವದೆಹಲಿ : ದಾಂಪತ್ಯ ಜೀವನದಲ್ಲಿ ನಡೆಯುವ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬೇಕೆ ಎಂಬ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಬುಧವಾರ ಈ ವಿಚಾರವಾಗಿ ಭಿನ್ನ ತೀರ್ಪು ನೀಡಿದೆ.
 
ಇಬ್ಬರು ಸದಸ್ಯರು ಇದ್ದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳ ಪೈಕಿ ಒಬ್ಬರು ವೈವಾಹಿಕ ಅತ್ಯಾಚಾರವನ್ನೂ ಅಪರಾಧ ಎಂದು ಪರಿಗಣಿಸಿದರೆ, ಮತ್ತೊಬ್ಬರು ಜಡ್ಜ್ ಅದೇನು ಅಸಾಂವಿಧಾನಿಕವಲ್ಲ ಎಂದು ತೀರ್ಪಿತ್ತಿದ್ದಾರೆ. ಇದರಿಂದಾಗಿ ಪ್ರಕರಣ ಕಗ್ಗಂಟಾಗಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ದೆಹಲಿ ಹೈಕೋರ್ಚ್ ಕೂಡ ಅರ್ಜಿದಾರರಿಗೆ ಅನುವು ಮಾಡಿಕೊಟ್ಟಿದೆ. ಐಪಿಸಿ ಸೆಕ್ಷನ್ 375 (ಅತ್ಯಾಚಾರ)ರಡಿ ಅಪ್ರಾಪ್ತೆಯಲ್ಲದ ಪತ್ನಿಯ ಜತೆ ಪತಿ ನಡೆಸುವ ಲೈಂಗಿಕ ಕ್ರಿಯೆಗೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

ವೈವಾಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾಯಮೂರ್ತಿ ರಾಜೀವ್ ಶಕ್ಧೇರ್ ಅವರು, ‘ಅತ್ಯಾಚಾರ ಕಾಯ್ದೆಯಲ್ಲಿ ವೈವಾಹಿಕ ಅತ್ಯಾಚಾರಕ್ಕೆ ನೀಡಿರುವ ವಿನಾಯಿತಿಯನ್ನೇ ರದ್ದುಪಡಿಸಬೇಕು.

 ಏಕೆಂದರೆ, ಈ ವಿನಾಯಿತಿ ಸಮಾನತೆ ಹಕ್ಕು, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ವ್ಯಕ್ತಿ ಸ್ವಾತಂತ್ರ್ಯ, ಜೀವ ರಕ್ಷಣೆ, ವೈಯಕ್ತಿಕ ಸ್ವಾತಂತ್ರ್ಯ ಹಕ್ಕುಗಳಿಗೆ ಸಂಬಂಧಿಸಿದ ಸಂವಿಧಾನದ 14, 15, 19(1) (ಎ) ಹಾಗೂ 21ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ’ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ