ಗ್ರಾಹಕನ ಥಳಿಸಿ ಸಾವಿಗೆ ಕಾರಣರಾದ ಹೋಟೆಲ್ ಸಿಬ್ಬಂದಿ
ತಡರಾತ್ರಿ ಹೋಟೆಲ್ ಸಿಬ್ಬಂದಿಗಳು ತಮ್ಮ ಸ್ನೇಹಿತನ ಬರ್ತ್ ಡೇ ಪಾರ್ಟಿ ಸಂಭ್ರಮದಲ್ಲಿದ್ದರು. ಈ ವೇಳೆ ಹೋಟೆಲ್ ಗೆ ಆಗಮಿಸಿದ ಕೂಲಿ ಕಾರ್ಮಿಕನಾಗಿದ್ದ ಗ್ರಾಹಕನನ್ನು ಕಂಡು ಸಿಬ್ಬಂದಿ ಕಳ್ಳತನಕ್ಕೆ ಬಂದಿರಬಹುದೆಂದು ತಪ್ಪು ತಿಳಿದಿದ್ದರು. ಇದೇ ಕಾರಣಕ್ಕೆ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದರು.
ಬಳಿಕ ಆತನ ಜೇಬಿನಲ್ಲಿದ್ದ ಫೋನ್ ನಿಂದ ಕುಟುಂಬದವರಿಗೆ ವಿಷಯ ತಿಳಿಸಿದ್ದರು. ಮನೆಗೆ ಹೋಗುವಾಗ ಆತನ ಮೈಮೇಲೆ ಅಂತಹ ಗಂಭೀರ ಗಾಯವಿರಲಿಲ್ಲ. ಹೀಗಾಗಿ ಆತನ ಪತ್ನಿಯೂ ಆಕ್ಷೇಪವಿಲ್ಲದೇ ಮನೆಗೆ ಕರೆದೊಯ್ದಿದ್ದಳು. ಆದರೆ ಬಳಿಕ ಆತ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಬಳಿಕ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ತನಿಖೆ ನಡೆಯುತ್ತಿದೆ.