ಅಪ್ರಾಪ್ತ, ಗರ್ಭಿಣಿ ಬಾಲಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್
ನೆರೆಮನೆಯಾತನಿಂದ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಗರ್ಭಿಣಿಯಾಗಿದ್ದಳು. ಹೊಟ್ಟೆನೋವು ಎಂದಾಗ ವೈದ್ಯರ ಬಳಿ ಪೋಷಕರು ಕರೆದೊಯ್ದಾಗ ಪ್ರಕರಣ ಬಯಲಿಗೆ ಬಂದಿತ್ತು. ನೆರೆಮನೆಯ 50 ವರ್ಷದ ವ್ಯಕ್ತಿ ಕೃತ್ಯವೆಸಗಿರುವುದನ್ನು ಬಾಲಕಿ ಬಾಯ್ಬಿಟ್ಟಿದ್ದಳು.
ಡಿಸೆಂಬರ್ 16 ರಂದು ಬಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಗ ಇದು ಆತ್ಮಹತ್ಯೆ ಎನ್ನಲಾಗಿತ್ತು. ಆದರೆ ಇದೀಗ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೋಷಕರು ನಾವು ಮನೆಯಲ್ಲಿಲ್ಲದಿದ್ದಾಗ ಅತ್ಯಾಚಾರ ಮಾಡಿದ ಆರೋಪಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.